ಕಡಬ: ಜ. 24 ರಂದು ಮೆರವಣಿಗೆ ಮೂಲಕ ಸಚಿವ ಎಸ್.ಅಂಗಾರರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಜ. 22. ನೂತನ ಸಚಿವರಾಗಿ ನರೆಮಕಗೊಂಡ ಎಸ್.ಅಂಗಾರ ಅವರಿಗೆ ಅಭಿನಂದನಾ ಸಭೆಯು ಬೆಳಂದೂರು, ನೆಲ್ಯಾಡಿ ಹಾಗೂ ಕಡಬ ಬಿಜೆಪಿ ಶಕ್ತಿಕೇಂದ್ರಗಳ ವತಿಯಿಂದ ಜ.24ರಂದು ಸಾಯಂಕಾಲ 3.00 ಗಂಟೆಗೆ ಕಡಬ ಶ್ರೀ ದುರ್ಗಾಂಬಿಕಾ ಸಭಾ ಭವನದಲ್ಲಿ ನಡೆಯಲಿದೆ.

ಈ ಕುರಿತು ದ.ಕ ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿ, ಮೊದಲು ಕಡಬ ಎಪಿಎಂಸಿ ಪ್ರಾಂಗಣ ಬಳಿಯಿಂದ ಸಚಿವರನ್ನು ಮೆರವಣಿಗೆ ಮೂಲಕ ಶ್ರೀ ದುರ್ಗಾಂಬಿಕಾ ಸಭಾ ಭವನಕ್ಕೆ ಕರೆತಂದು ಅಭಿನಂದಿಸಲಾಗುವುದು, ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಪುತೂರು ಶಾಸಕ ಸಂಜೀವ ಮಠಂದೂರು ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಸತೀಶ್ ನಾಯಕ್, ಸೀತಾರಾಮ ಗೌಡ ಪೊಸವಳಿಕೆ, ಗಿರೀಶ್ ಎ.ಪಿ ಮಧುಸೂದನ್ ಕೊಂಬಾರು, ಫಯಾಝ್ ಕೆನರಾ, ಪ್ರಕಾಶ್ ಎನ್ ಕೆ ಮೊದಲಾದವರು ಉಪಸ್ಥಿತರಿದ್ದರು.

Also Read  ರಾಮಕುಂಜ: ಮಳೆನೀರು ಕೊಯ್ಲು ಹಾಗೂ ಬೂದುನೀರು ನಿರ್ವಹಣೆ ಕುರಿತು ತರಬೇತಿ

error: Content is protected !!
Scroll to Top