ಧಾರ್ಮಿಕ ಕ್ಷೇತ್ರ ಕಲ್ಲುಗುಂಡಿ ಚರ್ಚ್ ಗೆ ಟಿ.ಎಂ.ಶಹೀದ್ ಭೇಟಿ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 22. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸುಮಾರು 3 ದಶಕಗಳಿಂದ ಕ್ರಿಯಾಶೀಲರಾಗಿದ್ದ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಮ್.ಶಹೀದ್ ರವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸುವರ್ಣ ಸಂಭ್ರಮದ ಅಂಗವಾಗಿ ಧಾರ್ಮಿಕ ಕ್ಷೇತ್ರವಾದ ಕಲ್ಲುಗುಂಡಿ ಸಂತ ಪ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಗೆ ಭೇಟಿ ನೀಡಿದರು.


ಚರ್ಚ್ ಧರ್ಮಗುರು ಫಾದರ್ ಪಾವ್ಲ್ ಕ್ರಾಸ್ತಾ ಟಿ.ಎಮ್.ಶಹೀದ್ ರವರಿಗೆ ಶುಭಾಶಯ ಸಲ್ಲಿಸಿ ಮಾತನಾಡಿ, ಜೀವನದಲ್ಲಿ ಉದ್ದೇಶ ಇಲ್ಲದೇ ಬದುಕುವರನ್ನು ಒಟ್ಟಿನಲ್ಲಿ ಏತಕ್ಕಾಗಿ ಬದುಕಬೇಕು, ಸಮಾಜಕ್ಕೆ ನಮ್ಮಿಂದ ಕೊಡುಗೆ ಎನು? ನಾವೆಲ್ಲ ಒಟ್ಟಾಗಿ ಈ ಪರಿಸರದ ಗ್ರಾಮದಲ್ಲಿ ಜನರಿಗೋಸ್ಕರ ಸೇವೆ ಮಾಡಿ ನೀವು ಏನು ಮಾಡಿದ್ದೀರಿ, ಐವತ್ತು ವರ್ಷ ಹಾಜರಿದ್ದೀರಿ ಐವತ್ತು ವರ್ಷ ಬದುಕುವುದೇ ದೇವರ ಗಿಫ್ಟ್ ದೇವರು ಒಳ್ಳೆಯ ಆರೋಗ್ಯ ನೀಡಿ ನೂರು ಸಂವತ್ಸರ ಮುಗಿಸಲು ನಿಮಗೆ ಕರುಣಿಸಲಿ ಎಂದು ಹಾರೈಸಿದರು. ಟಿ.ಎಮ್.ಶಹೀದ್ ತೆಕ್ಕಿಲ್ ಮಾತನಾಡಿ, ಕ್ರೈಸ್ತ ಸಮುದಾಯದ ಎಲ್ಲರನ್ನೂ ನಾವು ಗೌರವಿಸುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರು ಕೊಟ್ಟಂತಹ ಕೊಡುಗೆ ಅಪಾರವಾದದ್ದು, ಪ್ರಪಂಚದಾದ್ಯಂತ ಕ್ರೈಸ್ತ ಸಮುದಾಯ ಶಿಕ್ಷಣವನ್ನು ಮತ್ತು ಆರೋಗ್ಯಕ್ಕೆ ಮಹತ್ವವನ್ನು ಕೊಟ್ಟಂತಹ ಧರ್ಮ ಇನ್ನೊಂದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುವರ್ಣ ಸಂಭ್ರಮದ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಕೆ.ಎಮ್ .ಮುಸ್ತಫಾ ಸುಳ್ಯ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ಲಿಸ್ಸಿ ಮೊನಾಲಿಸಾ, ಅಶ್ರಫ್ ಗುಂಡಿ, ತಾಜ್ ಮಹಮ್ಮದ್ ಸಂಪಾಜೆ, ದಿನಕರ ಸಣ್ಣಮನೆ, ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕಾರ್, ಸುಳ್ಯ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ರಹೀಂ ಬೀಜದ ಕಟ್ಟೆ, ಉಸ್ಮಾನ್ ಸಂಟ್ಯಾರ್, ಹಂಸ ಕಲ್ಲುಗುಂಡಿ, ರಿಯಾಝ್ ಕಲ್ಲುಗುಂಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Also Read  ಪಾಲ್ತಾಡಿ ಬೂತ್ ಬಿಜೆಪಿ ಸ್ಥಾಪನ ದಿನಾಚರಣೆ ►ಮಹಿಳಾ ಅಭಿಯಾನ

error: Content is protected !!
Scroll to Top