ಸುಳ್ಯ: ಸಾಮಾಜಿಕ ಧುರೀಣ ಟಿ.ಎಮ್.ಶಹೀದ್ ರವರ 50 ನೇ ಸುವರ್ಣ ಸಂಭ್ರಮ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 22. ರಾಜಕೀಯ, ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ, ಸಹಕಾರಿ, ಕ್ರೀಡಾ ಹಾಗೂ ಕೃಷಿ ಕ್ಷೇತ್ರದಲ್ಲಿ 3 ದಶಕದಿಂದ ಕ್ರಿಯಾಶೀಲರಾಗಿದ್ದ ಅರಂತೋಡು ಟಿ.ಎಮ್.ಶಹೀದ್ ರವರ 50ನೇ ಸುವರ್ಣ ಸಂಭ್ರಮ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ( ಮೌಲೀದ್ ಪಾರಾಯಣ) ಜ.21 ರಂದು ತೆಕ್ಕಿಲ್ ಟಿ.ಎಮ್.ಶಹೀದ್ ನಿವಾಸದಲ್ಲಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮವನ್ನು ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿನೇರವೆರಿಸಿದರು. ಪೇರಡ್ಕ ಮಸೀದಿ ಖತೀಬರಾದ ಸುಹೇಲ್ ದಾರಿಮಿ, ನವಾಝ್ ದಾರಿಮಿ, ಝಕರಿಯಾ ದಾರಿಮಿ ಆರ್ಕಾನ, ನವಾಜ್ ದಾರಿಮಿ, ಭಾಗವಹಿಸಿದರು. ಸುವರ್ಣ ಸಂಭ್ರಮದ ಅಧ್ಯಕ್ಷರಾದ ಸದಾನಂದ ಮಾವಜಿ,
ಕರುಣ್ ಅಡ್ಪಂಗಾಯ, ಪ್ರಧಾನ ಕಾರ್ಯದರ್ಶಿ ಕೆ.ಟಿ.ವಿಶ್ವನಾಥ, ಪರಶುರಾಮ ಚಿಲ್ತಡ್ಕ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಟಿ.ಎಮ್.ಬಾಬಾ ಹಾಜಿ,ಅಶ್ರಫ್ ಗುಂಡಿ, ತಾಜ್ ಮಹಮದ್ ಸಂಪಾಜೆ, ಹಾಜಿ ಅಬ್ಬಾಸ್ ಸಂಟ್ಯಾರ್, ಅಬ್ದುಲ್ ಖಾದರ್ ಪಠೇಲ್, ಹಾಜಿ ಮೊಹಿದಿನ್ ಪ್ಯಾನ್ಸಿ ಸುಳ್ಯ, ಹಾಜಿ ಎಸ್.ಇ ಮಹಮ್ಮದ್, ಹಾಜಿ ರಝಾಕ್ ಮೊಟ್ಟಂಗಾರ್, ಹಾಜಿ ಕೆ.ಎಮ್.ಮಹಮ್ಮದ್, ಟಿ.ಎಮ್.ಜಾವೇದ್ ತೆಕ್ಕಿಲ್, ಅಬೂಬಕ್ಕರ್ ಪಾರೆಕ್ಕಲ್, ಧನುರಾಜ್, ಅಮೀರ್ ಕುಕ್ಕುಂಬಳ, ಉಮ್ಮರ್, ಮಜೀದ್ ಸಿಟಿ ಮೆಡಿಕಲ್ಸ್, ಹನೀಫ್, ಮೂಸಾನ್, ಉಸ್ಮಾನ್ ಸಂಟ್ಯಾರ್, ತಾಜ್ ಟರ್ಲಿ, ಬಾಲಕೃಷ್ಣರೈ ಮುಂತಾದವರು ಆಗಮಿಸಿ ಶುಭಾಶಯ ಸಲ್ಲಿಸಿದರು.

Also Read  ಕಡಬ: ಫೈನಾನ್ಸ್ ಗೆ ಹಣ ಕಟ್ಟಲು ತೆರಳಿದ ಯುವಕ ನಾಪತ್ತೆ

error: Content is protected !!
Scroll to Top