ಮಂಗಳೂರು: ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ- ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಖಾಸಗಿ ಬಸ್ ಚಾಲಕನಿಗೆ ಪೆಟ್ರೋಲ್ ಎರಚಿ ಬೆಂಕಿ ಕೊಡಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫೈಸಲ್ ನಗರದ ಮಹಮ್ಮದ್ ಅಶ್ರಫ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜ.19ರ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಸ್ಟೇಟ್ ಬ್ಯಾಂಕ್ ಕಡೆಯಿಂದ 23 ನಂಬರಿನ ಸುವರ್ಣ ಹೆಸರಿನ ಖಾಸಗಿ ಬಸ್ ಪಡೀಲ್ ಫೈಸಲ್ ನಗರಕ್ಕೆ ತೆರಳುತ್ತಿದ್ದ ವೇಳೆ ಸೈಡ್ ಕೊಡದ ವಿಚಾರದಲ್ಲಿ ಬೈಕ್ ಸವಾರ ರೌಡಿಸಂ ತೋರಿಸಿ, ಬೈಕನ್ನು ಅಡ್ಡ ಇಟ್ಟು ಬೈದಿದ್ದಲ್ಲದೆ, ತನ್ನ ಕೈಲಿದ್ದ ಪೆಟ್ರೋಲ್ ಬಾಟಲಿಯಿಂದ ಚಾಲಕ ಸಂಪತ್ ಮತ್ತು ಬಸ್ಸಿನ ಮುಂಭಾಗಕ್ಕೆ ಎರಚಿದ್ದ. ಇದರಿಂದ ಅಪಾಯ ಅರಿತ ಚಾಲಕ ಕೂಡಲೇ ಅಲ್ಲಿಂದ ಪರಾರಿಯಾಗಿದ್ದು, ಅನಂತರ ಸ್ಥಳೀಯರು ಆರೋಪಿಯನ್ನು ತರಾಟೆಗೆತ್ತಿಕೊಂಡಿದ್ದು ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಕಂಕನಾಡಿ ಠಾಎಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕಂಕನಾಡಿ ಫೈಸಲ್ ನಗರ ನಿವಾಸಿ ಅಶ್ರಫ್ ನನ್ನು ಬಂಧಿಸಲಾಗಿದೆ.

Also Read  ವಿವಿಧ ರಂಗಾಯಣಗಳ ನಿರ್ದೇಶಕರು ಮತ್ತು ಅಕಾಡೆಮಿ ಪ್ರಾಧಿಕಾರಿಗಳ ಸದಸ್ಯರ ನೇಮಕ

error: Content is protected !!
Scroll to Top