ಮಂಗಳೂರು: ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ ಪ್ರಕರಣ ➤ ಆರೋಪಿಯನ್ನು ಕೂಡಲೇ ಬಂಧಿಸುವಂತೆ ವಿಹಿಂಪ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಓವರ್ ಟೇಕ್ ಮಾಡುವ ನೆಪದಲ್ಲಿ ಖಾಸಗಿ ಬಸ್ ಚಾಲಕ ಸಂಪತ್ ಪೂಜಾರಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲು ಯಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ, ಈ ಕೃತ್ಯವನ್ನು ಎಸಗಿದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ವಿಹಿಂಪ ಬಜರಂಗದಳ ಮನವಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಹತ್ಯೆಯ ಯತ್ನ, NRC ಹೆಸರಿನಲ್ಲಿ ಗಲಭೆ, ಹನಿ ಟ್ರ್ಯಾಪ್, ಹಿಂದೂಗಳ ಮೇಲೆ ಹಲ್ಲೆ ಮುಂತಾದ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಖಾಸಗಿ ಬಸ್ ಚಾಲಕರೋರ್ವರಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟು ಕೊಲೆಯತ್ನಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಬಸ್ ಚಾಲಕ ಸಂಪತ್ ಪೂಜಾರಿಯನ್ನು ಭೇಟಿ ಮಾಡಿದ ಧೈರ್ಯ ಹೇಳಿದರು. ಅಲ್ಲದೆ, ಆರೋಪಿ ಅಶ್ರಫ್ ನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪವೆಲ್, ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಮತ್ತು ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಮೊದಲಾದವರು ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿ: ಇತ್ತಂಡಗಳ ನಡುವೆ ತಾರಕಕ್ಕೇರಿದ ಜಗಳ ➤ ಐವರು ಆಸ್ಪತ್ರೆಗೆ ದಾಖಲು

error: Content is protected !!
Scroll to Top