ಕೊಣಾಜೆ: ಸಿಲಿಂಡರ್ ತುಂಬಿದ್ದ ಪಿಕ್-ಅಪ್ ವಿದ್ಯುತ್ ಕಂಬಕ್ಕೆ ಢಿಕ್ಕಿ ➤ ತಪ್ಪಿದ ಭಾರೀ ಅಪಾಯ

(ನ್ಯೂಸ್ ಕಡಬ) newskadaba.com ಕೊಣಾಜೆ, ಜ.20. ಸಿಲಿಂಡರ್ ತುಂಬಿದ್ದ ಪಿಕ್ ಅಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಶಾರ್ಟ್ ಆಗಿ ಬೆಂಕಿ ಹತ್ತಿಕೊಂಡಿದ್ದು , ಕೂದಲೆಲೆಯ ಅಂತರದಲ್ಲಿ ಭಾರೀ ಪ್ರಾಣಾಪಾಯ ತಪ್ಪಿದ ಘಟನೆ ಬುಧವಾರದಂದು ನಡೆದಿದೆ.

ಪಜೀರು ಗ್ರಾಮ ಪಂಚಾಯತ್ ಕಚೇರಿಯ ಹಿಂಬದಿ ರಸ್ತೆಯಲ್ಲಿ ಪಿಕ್-ಅಪ್ ವಾಹನದಲ್ಲಿ HP ಗ್ಯಾಸ್ ಸಿಲಿಂಡರ್ ಗಳನ್ನು‌ ಗ್ರಾಹಕರಿಗೆ ವಿತರಿಸುತ್ತಿದ್ದು, ವಾಹನವನ್ನು ಹಿಂತೆಗೆಯುವ ತೆಗೆಯುವ ವೇಳೆ ಅಲ್ಲಿದ್ದ ವಿದ್ಯುತ್ ಕಂಬವೊಂದಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬವು ತುಂಡಾಗಿ ಪಿಕ್ ಅಪ್ ವಾಹನದ ಮೇಲೆ ಉರುಳಿ ಬಿದ್ದಿದ್ದು ವಿದ್ಯುತ್ ಲೈನ್ ಸಿಲಿಂಡರ್ ಮೇಲೆ ಬಿದ್ದಿತ್ತು.ಅಷ್ಟರಲ್ಲಿ ಸಂಪರ್ಕ ಕಡಿತಗೊಂಡಿದ್ದ ವಿದ್ಯುತ್ ಮತ್ತೆ ಪವರ್ ಆನ್ ಮಾಡಿದ್ದರ ಪರಿಣಾಮ ಬೆಂಕಿ ಹತ್ತಿದ್ದು ಸುತ್ತಮುತ್ತಲಿನ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡ ಪ್ರದೇಶ ನಿರ್ಜನ ಪ್ರದೇಶವಾದುದರಿಂದ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

Also Read  ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಚಿಂತನೆ

error: Content is protected !!
Scroll to Top