ಮಂಗಳೂರು: ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಮಂಗಳೂರು (ನಗರ) ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆನ್‍-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಾವೂರು ಗ್ರಾಮದ ವಾರ್ಡ್ ನಂ. 19 ರ ಮೇರಿಹಿಲ್ ಅಂಗನವಾಡಿ ಕೇಂದ್ರ, ಕುಂಜತ್ತಬೈಲ್ ಗ್ರಾಮದ ವಾರ್ಡ್ ನಂ. 15ರ ವೈಧ್ಯನಾಥೇಶ್ವರ ಕಾವೂರು ಅಂಗನವಾಡಿ ಕೇಂದ್ರ ಮತ್ತು ಫಳ್ನೀರ್ ಗ್ರಾಮದ ವಾರ್ಡ್ ನಂ.39ರ  ಗೋರಿಗುಡ್ಡ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ  ಇದೆ.


ಕಸಬ ಬಜಾರ್ ಗ್ರಾಮದ, ವಾರ್ಡ್ ನಂ. 43ರ ಗಣೇಶ್ ಫ್ರೆಂಡ್ಸ್ ಕುದ್ರೋಳಿ ಅಂಗನವಾಡಿ ಕೇಂದ್ರ, ವಾರ್ಡ್ ನಂ. 45ರ ಸೈಂಟ್ ಆ್ಯನ್ಸ್ ಬೋಳಾರ ಅಂಗನವಾಡಿ ಕೇಂದ್ರ, ಕುಳಾಯಿ ಗ್ರಾಮದ ವಾರ್ಡ್ ನಂ. 9ರ ಪಣಂಬೂರು ಮೊಗವೀರ ಸಭಾ ಅಂಗನವಾಡಿ ಕೇಂದ್ರ, ಬೈಕಂಪಾಡಿ ಗ್ರಾಮದ ವಾರ್ಡ್ ನಂ. 10 ರ ಕುಡುಂಬೂರು ಅಂಗನವಾಡಿ ಕೇಂದ್ರ, ಫಳ್ನೀರ್ ಗ್ರಾಮದ  ವಾರ್ಡ್ ನಂ.39ರ ಗೋರಿಗುಡ್ಡ ಅಂಗನವಾಡಿ ಕೇಂದ್ರ, ಬೆಂಗ್ರೆ ಗ್ರಾಮದ ವಾರ್ಡ್ ನಂ.11ರ ಬೆಂಗ್ರೆ ಸೂಪರ್ ಸ್ಟಾರ್ ಅಂಗನವಾಡಿ ಕೇಂದ್ರ, ವಾರ್ಡ್ ನಂ.60ರ  ಬೆಂಗ್ರೆ ಕಸಬಾ ಅಂಗನವಾಡಿ ಕೆಂದ್ರ ಮತ್ತು ವಾರ್ಡ್ ನಂ. 60ರ ಬೆಂಗ್ರೆ ಶಾಲೆ 2 ಅಂಗನವಾಡಿ ಕೇಂದ್ರ . ಒಟ್ಟು 8 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಅರ್ಜಿ ಸಲ್ಲಿಸಲು ಫೆಬ್ರವರಿ 6 ಕೊನೆಯ ದಿನ.

Also Read  ಕರ್ಕಶ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹರಿಸಿ ನಾಶ  ➤ ಎಸ್.ಪಿ ಮಿಥುನ್ ಕುಮಾರ್‌                          

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ  ವೆಬ್ ಸೈಟ್ www.anganawadirecruit.kar.nic.in ದೂ.ಸಂಖ್ಯೆ: 0824-2432809ನ್ನು ಅಥವಾ ಶಿಶು ಅಭಿವೃದ್ಧಿ ಯೋಜನಾಶಿಕಾರಿಗಳ ಕಛೇರಿ ಸಿಲ್ವಾ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top