ನಕಲಿ ದಾಖಲೆಪತ್ರ ಸೃಷ್ಟಿಸಿ ಜಾಗ ಮಾರಾಟ ಮಾಡುತ್ತಿದ್ದ ಖದೀಮರು..! ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 20. ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬೆಲೆಬಾಳುವ ಜಾಗಗಳನ್ನು ತಮ್ಮ ಹೆಸರಿಗೆ ನೋಂದಾಯಿಸಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತರನ್ನು ಕೀರ್ತನಾ ಶೇಖರ್, ಶೇಖರ್, ಪವನ್ ಕುಮಾರ್, ಪ್ರಜ್ವಲ್ ರಾಮಯ್ಯ ಹಾಗೂ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಇವರಿಂದ 16.83 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 35 ಲಕ್ಷದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ‌. ಯಾವುದಾದರೂ ಹೆಚ್ಚು ಬೆಲೆಗೆ ಮಾರಾಟವಾಗುವ ಖಾಲಿ ಜಾಗವನ್ನು ತಮ್ಮಲ್ಲಿಯೇ ಒಬ್ಬರ ಹೆಸರಿಗೆ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ, ಅದೇ ತಂಡದಿಂದ ಓರ್ವನನ್ನು ರಿಯಲ್ ಎಸ್ಟೇಟ್ ಏಜೆಂಟನ ಹಾಗೆ ವರ್ತಿಸಿ ಹಣ ಉಳ್ಳವರನ್ನು ಸಂಪರ್ಕಿಸುತ್ತಾರೆ. ಯಾರಾದ್ರೂ ಸಿಕ್ಕಿದರೆ ಖಾಲಿ ಸೈಟ್ ತೋರಿಸಿ, ಇದರ ಮಾಲೀಕರಿಗೆ ಹಣದ ಅಗತ್ಯವಿದ್ದು, ಕಡಿಮೆ ಬೆಲೆಗೆ ತೆಗೆಸಿಕೊಡುವುದಾಗಿ ನಂಬಿಸುತ್ತಾನೆ. ಖರೀದಿದಾರರು ಸೈಟ್ ನೋಡಲು ಬಂದಾಗ ತಂಡದಲ್ಲಿ ನಕಲಿ ದಾಖಲೆ ಪತ್ರಗಳನ್ನು ಮಾಡಿಸಿಕೊಂಡ ವ್ಯಕ್ತಿ ಒಬ್ಬ ಮಹಿಳೆಯ ಜೊತೆ ಬಂದು ದಂಪತಿಯ ರೀತಿ ವರ್ತಿಸುತ್ತಾರೆ. ಹೆಂಡ್ತಿಯಾದವಳು ಹಣದಲ್ಲಿ ಬಾರ್ಗೇನ್ ಮಾಡಿ ಕಷ್ಟದಲ್ಲಿ ಇರುವುದರಿಂದ ಜಾಗ ಮಾರುತ್ತಿದ್ದು ಎಂದು ನಟಿಸಿ, ಒಂದು ಹಂತದ ಬೆಲೆ ನಿಗದಿಪಡಿಸಿ ಡೀಲ್ ಸೆಟ್ ಮಾಡುತ್ತಿದ್ದರು. ಇವರ ವಿರುದ್ದ ಫೋರ್ಜರಿ ಮತ್ತು ಮೋಸ ನಡೆಸಿದ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದೆ.

Also Read  ಸ್ಕಾಲರ್ ಶಿಪ್ ಮಂಜೂರಾತಿಯಲ್ಲಿ ವಿಳಂಬ ಮತ್ತು ಪಿ.ಹೆಚ್.ಡಿ, ಎಮ್.ಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ವಿರುದ್ಧ ಸಿಎಫ್ಐ ವತಿಯಿಂದ "ಸ್ಕಾಲರ್ ಶಿಪ್ ಕೊಡಿ" ವಿದ್ಯಾರ್ಥಿ ಆಂದೋಲನದ ಘೋಷಣೆ

error: Content is protected !!
Scroll to Top