ಸುಳ್ಯ: ರೈತಪರ ಸಂಘಟನೆಗಳ ವತಿಯಿಂದ ಉಪವಾಸ ಧರಣಿ ಸತ್ಯಾಗ್ರಹ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 20. ರೈತ, ಕಾರ್ಮಿಕ, ದಲಿತ ಹಾಗೂ ಜನಪರ ಚಳವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಇಂದು ಖಾಸಗಿ ನಿಲ್ದಾಣದ ಬಳಿ ನಡೆಯಿತು.

ಈ ಸತ್ಯಾಗ್ರಹದ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು, ರೈತ ಸಂಘದ ಉಪಾಧ್ಯಕ್ಷ ತೀರ್ಥರಾಮ ಉಳುವಾರು, ರೈತ ಮುಖಂಡ ಮಂಜುನಾಥ್ ಮಡ್ತಿಲ, ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಜಿಗುಂಡಿ, ಕಾರ್ಮಿಕ ಮುಖಂಡರಾದ ನಾರಾಯಣ ಮೇಸ್ತ್ರಿ, ಮಂಜುನಾಥ್ ಮೇಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

Also Read  ಸಿಇಟಿ ಪರೀಕ್ಷೆ ► ಇಲ್ಲಿದೆ ವಿದ್ಯಾರ್ಥಿಗಳ ಮೊದಲ ದಿನದ ಹಾಜರಾತಿ

error: Content is protected !!
Scroll to Top