ಉಳ್ಳಾಲದ ಘಟನೆಯ ಬೆನ್ನಿಗೇ ಕೊಣಾಜೆಯಲ್ಲೂ ವಿಕೃತಿ ಮೆರೆದ ದುಷ್ಕರ್ಮಿಗಳು ➤ ಭಜನಾಮಂದಿರದಲ್ಲಿ ಮಲಮೂತ್ರ ಮಾಡಿ ದುಷ್ಕೃತ್ಯ

(ನ್ಯೂಸ್ ಕಡಬ) newskadaba.com ಕೊಣಾಜೆ, ಜ. 20. ಉಳ್ಳಾಲದ ಕೊರಗಜ್ಜನ ಕಟ್ಟೆಯಲ್ಲಿ ವಿಕೃತಿ ಮೆರೆದ ಬೆನ್ನಲ್ಲೇ ಕೊಣಾಜೆಯಲ್ಲೂ ಇದೇ ತರದ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವ ಕೃತ್ಯ ನಡೆದಿದೆ.

ಕೊಣಾಜೆ ವಿವಿಯ ಆಡಳಿತ ಸೌಧ ಕಟ್ಟಡದ ಬಳಿಯಿರುವ ಪರಂಡೆ ಪೂರ್ಣಗಿರಿ, ಮುಲಾರ ಗೋಪಾಲಕೃಷ್ಣ ಭಜನಾ ಮಂದಿರದ ಅಂಗಣದಲ್ಲಿ ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜನೆಗೈದು ವಿಕೃತಿ ಮೆರೆದಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆಯ ಕುರಿತು ಕೊಣಾಜೆ ಠಾಣೆಗೆ ದೂರು ನೀಡಲಾಗಿದ್ದು, ಸಿಸಿ ಟಿವಿ ಫೂಟೇಜ್ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

Also Read  ಬಂಟ್ವಾಳ : ಶೇ.77.7 ಮಂದಿಯಿಂದ ಗ್ರಾ.ಪಂ ಹಕ್ಕು ಚಲಾವಣೆ

error: Content is protected !!
Scroll to Top