ಮಂಗಳೂರು: ಸೈಡ್ ಕೊಡೋ ವಿಚಾರದಲ್ಲಿ ಬೈಕ್ ಸವಾರ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ➤ ಬಸ್ ಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಬೈಕ್ ಸವಾರ.!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಸೈಡ್ ಕೊಡುವ ವಿಚಾರವಾಗಿ ಬೈಕ್ ಸವಾರ ಹಾಗೂ ಬಸ್ ಚಾಲಕನ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಬೈಕ್ ಸವಾರ ಬಸ್ ಗೆ ಬೆಂಕಿ ಹಚ್ಚಲು ಮುಂದಾದ ಘಟನೆ ಪಡೀಲ್ ಎಂಬಲ್ಲಿ ನಡೆದಿದೆ.

ಸ್ಟೇಟ್ ಬ್ಯಾಂಕ್ ನಿಂದ ಫೈಝಲ್ ನಗರಕ್ಕೆ ತೆರಳುತ್ತಿದ್ದ 23 ನಂಬರಿನ ಖಾಸಗಿ ಬಸ್ ಗೆ ಬೈಕ್ ಸವಾರ ಅಶ್ರಫ್ ಎಂಬಾತ ಸೈಡ್ ಕೊಡೋ ವಿಚಾರವಾಗಿ ಬಸ್ ಚಾಲಕನ ಜೊತೆ ವಾಗ್ವಾದ ನಡೆಸಿದ್ದು, ತದನಂತರ ಬಸ್ ಫೈಝಲ್ ನಗರದಿಂದ ಹಿಂದಿರುಗುತ್ತಿದ್ದಂತೆಯೇ ಪಡೀಲ್ ಬಳಿ ಬೈಕ್ ಸವಾರ ಅಶ್ರಫ್, ಬಸ್ ಸವಾರ ಸಂಪತ್ ಪೂಜಾರಿ ಎಂಬವರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಇದೀಗ ಬಸ್ ಚಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ.

Also Read  ಕುಟ್ರುಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ವರ್ಗಾವಣೆ ➤ ಪ್ರಭಾರ ಪಿಡಿಒ ಆಗಿ ರಾಮಕುಂಜದ ಜೆರಾಲ್ಡ್ ಮಸ್ಕರೇನಸ್ ನೇಮಕ

error: Content is protected !!
Scroll to Top