ಪೋಷಕರಿಗೆ ಗುಡ್ ನ್ಯೂಸ್ ➤ ಖಾಸಗಿ ಶಾಲಾ ಶುಲ್ಕದಲ್ಲಿ ಶೆ.35ರಷ್ಟು ಕಡಿತ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 20. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲಾರಂಭವಾಗಿಲ್ಲವಾದರೂ ಈ ನಡುವೆ ಪೋಷಕರಿಗೆ ಗುಡ್ ನ್ಯೂಸ್ ಕೊಡಲು ರಾಜ್ಯ ಸರಕಾರ ಮುಂದಾಗಿದ್ದು, ಶಾಲಾ ಶುಲ್ಕದಲ್ಲಿ ಶೇ.30 ರಿಂದ 35 ರಷ್ಟು ಕಡಿತವಾಗುವ ಸಾಧ್ಯತೆಯಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ಈಗಾಗಲೇ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಶಾಲಾ ಶುಲ್ಕದಲ್ಲಿ ಕಡಿಮೆ ಮಾಡುವಂತೆ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದು, ಅಲ್ಲದೇ ಜನವರಿ 13ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪೋಷಕರ ಹಾಗೂ ಖಾಸಗಿ ಶಾಲೆಗಳ ಸಂಘಟನೆಗಳ ಜೊತೆಗೆ ಸಭೆ ನಡೆಸಿ ಶುಲ್ಕ ಕಡಿತಗೊಳಿಸುವಂತೆ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಶೇ.30ರಿಂದ 35 ರಷ್ಟು ಶುಲ್ಕ ಕಡಿತವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Also Read  ಮೊದಲ ಬಾರಿಗೆ ಸುಳ್ಯಕ್ಕೆ ಒಲಿದ ಸಚಿವ ಸ್ಥಾನ ➤ ಶಾಸಕ ಎಸ್‌.ಅಂಗಾರರಿಗೆ ಮಂತ್ರಿಗಿರಿ ಫಿಕ್ಸ್

error: Content is protected !!
Scroll to Top