ಕಡಬ: ಇತ್ತೀಚೆಗೆ ನಿಧನರಾದ ಮೋಹನ ಗೌಡ ನೆಲ್ಲರವರಿಗೆ ಶ್ರದ್ದಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಕುಟ್ರುಪಾಡಿ, ಜ. 20. ಇತ್ತೀಚೆಗೆ ನಿಧನರಾದ ಬಲ್ಯ ಗ್ರಾಮದ ನೆಲ್ಲ ಮೋಹನ ಗೌಡ ಅವರ ಉತ್ತರಕ್ರಿಯೆ ಕಾರ್ಯಕ್ರಮವು ಮಂಗಳವಾರದಂದು ನೆಲ್ಲ ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭ ಪ್ರಮುಖರಾದ ಪುತ್ತಿಲ ವಿಶ್ವನಾಥ ಗೌಡ, ಕುಟುಂಬದ ಹಿರಿಯರಾದ ನೆಲ್ಲ ಬಾಬು ಗೌಡ ಮತ್ತು ಸಹೋದರರು, ಮೃತರ ಮಾವ ಹೊನ್ನಪ್ಪ ಗೌಡ, ಗ್ರಾ.ಪಂ. ಸದಸ್ಯರಾದ ಮೀನಾಕ್ಷಿ, ರವಿಪ್ರಸಾದ್ ಶೆಟ್ಟಿ, ಮೃತರ ತಂದೆ ಮಂಜಯ್ಯ ಗೌಡ, ತಾಯಿ ಗಿರಿಜ, ಸಹೋದರ ಬಾಲಕೃಷ್ಣ ಗೌಡ ಹಾಗೂ ಕುಟುಂಬಸ್ಥರು, ಶಿಕ್ಷಕ ಗುಡ್ಡಪ್ಪ ಬಲ್ಯ ಸೇರಿದಂತೆ ಅವರ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Scroll to Top