ಸಂಜೀವಿನಿ ಗುರುಶ್ರೀ ಸ್ವ-ಸಹಾಯ ಸಂಘ ಇತ್ರಾಡಿ ವತಿಯಿಂದ ಸಂಘದ ವಿಜೇತ ಗ್ರಾ.ಪಂ. ಅಭ್ಯರ್ಥಿ ಶ್ರೀಮತಿ ಮೀನಾಕ್ಷಿಯವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ. 20. ಸಂಜೀವಿನಿ ಗುರುಶ್ರೀ  ಸ್ವ-ಸಹಾಯ ಸಂಘ ಇತ್ರಾಡಿ ವತಿಯಿಂದ ಜ.19 ರಂದು , ಸಂಘದ ಸದಸ್ಯರಾದ  ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ  ಮೀನಾಕ್ಷಿ ರವರು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಪ್ರಯುಕ್ತ ಸಂಘದ ಸದಸ್ಯರು ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು .

 

“ನಮ್ಮ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ನಾನು ಸದಾ ಸಿದ್ದಳಾಗಿದ್ದು, ಸದಾ ಶ್ರಮಿಸುತ್ತಾ ಜನಪರ  ಕೆಲಸ ಮಾಡುವುದಾಗಿ  ಶ್ರೀಮತಿ ಮೀನಾಕ್ಷಿಯವರು ಸನ್ಮಾನಿತ ನೆಲೆಯಲ್ಲಿ ತಿಳಿಸಿದರು. ನಂತರ ಮಾತನಾಡಿದ ಶಶಿಧರ್ ರವರು “ನಮ್ಮ ಸಂಘದ ಸದಸ್ಯರು ನಮ್ಮ ಹೆಮ್ಮೆ ”  ಎಂದರು . ಸಭಾಧ್ಯಕ್ಷತೆಯನ್ನು ಶೇಖರ ಪೂಜಾರಿಯವರು ವಹಿಸಿದ್ದರು. ಕು.ನೀರಜ್ , ಕು.ನಿವ್ಯಾ ಶ್ರೀ , ಕು.ಪ್ರತಿಮಾ ರವರ ಪ್ರಾರ್ಥನೆಯೊಂದಿಗೆ  ಚಾಲನೆಗೊಂಡ ಸಭೆಯು  ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆಗೊಂಡಿತು. ಸಭೆಯಲ್ಲಿ ನೆರದಿರುವ ಸದಸ್ಯರನ್ನು ಉಪಾಧ್ಯಕ್ಷ ಜತ್ತಪ್ಪ ರೈ ಸ್ವಾಗತಿಸಿ , ಶ್ರೀಮತಿ ವಸಂತಿ ರವರು ಧನ್ಯವಾದಗೈದ ಸಭೆಯನ್ನು ಬಸದಿ ಶ್ರೀ ಧರಣೇಂದ್ರ ಇಂದ್ರ ರವರು ನಿರೂಪಿಸಿದರು.

Also Read  ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟು ಬಂದ್ ➤ ವಾಹನ ಸಂಚಾರವೂ ವಿರಳ

error: Content is protected !!
Scroll to Top