ಉಪ್ಪಿನಂಗಡಿ: ವಕೀಲರ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 19. ನಗರದ ಹೃದಯ ಭಾಗವಾದ ದಾವೂದ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ವಕೀಲೆ ಜುಬೇದಾ ಆಸಿಫ್ ಸರಳಿಕಟ್ಟೆ ಅವರ ಕಛೇರಿಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಚಾಣಕ್ಯ ಲಾ ಛೇಂಬರಿನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಅವರಿಗೆ ಶಾಸಕರು ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕರನ್ನು ಸಾಹಿತಿ, ಚಿಂತಕ, ಬರಹಗಾರ ಜಲೀಲ್ ಮುಕ್ರಿಯವರು ಸನ್ಮಾನಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಮಾಲಿಕುದ್ದೀನಾರ್ ಕೇಂದ್ರ ಜುಮ್ಮಾ ಮಸೀದಿಯ ಖತೀಬರು ಬಹು. ನಝೀರ್ ಅಝ್ ಹರಿ ಬೊಳ್ಮಿನಾರ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಕಜೆ ಲಾ ಛೇಂಬರಿನ ಹಿರಿಯ ವಕೀಲರಾದ ಮಹೇಶ್ ಕಜೆ, ನ್ಯಾಯವಾದಿ ಅಶ್ರಫ್ ಕೆ ಅಗ್ನಾಡಿ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ನವೀನ್ ರೈ, ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ಫೈಝಲ್ ಮೂರುಗೋಳಿ ಉಪಸ್ಥಿತರಿದ್ದರು. ಎಮ್ಮೆಸ್ಸೆಮ್ ಅಬ್ದುಲ್ ರಹೀಂ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು.

Also Read  ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಸಿಎಂ ಅನುಮತಿ

error: Content is protected !!
Scroll to Top