ಜ.21 ಮತ್ತು 22 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಮಂಗಳೂರು ಮಹಾನಗರಪಾಲಿಕಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದಲ್ಲಿ ಪಂಪು ನಂಬ್ರ 3 ರ ಡೆಲಿವರಿ ಕೊಳವೆ ಜೋಯಿಂಟ್ ಮಾಡಿ ಲಿಂಕಿಂಗ್ ಕಾಮಗಾರಿಗಾಗಿ ಹಾಗೂ  ಜಾಕ್‍-ವೆಲ್‍ ನಲ್ಲಿರುವ ಕಸ ಕಡ್ಡಿಗಳನ್ನು ತೆಗೆದು ರಿಪೇರಿ ಕಾಮಗಾರಿ ಹಾಗೂ ಶುಚಿಗೊಳಿಸುವ ಹಿನ್ನೆಲೆಯಲ್ಲಿ  ಜನವರಿ 21 ರಂದು ಬೆಳಿಗ್ಗೆ 6 ಗಂಟೆಯಿಂದ 22 ರಂದು ಬೆಳಿಗ್ಗೆ 6 ಗಂಟೆವರೆಗೆ  ಮುಕ್ಕ, ಸುರತ್ಕಲ್ ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್.ಐ.ಟಿ.ಕೆ  ಜಲ್ಲಿಗುಡ್ಡೆ, ಕೂಳೂರು, ಕೊಟ್ಟಾರ ಭಾಗಶ:  ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಹಾನಗರಪಾಲಿಕೆ, ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬೆಳ್ತಂಗಡಿ: ಆಪೆ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ ➤ ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ

error: Content is protected !!
Scroll to Top