ಮಂಗಳೂರು: ಕೆ.ಎಂ.ಎಫ್ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗಡೆಯವರಿಂದ ಪಶುಸಂಗೋಪನಾ ಸಚಿವರ ಭೇಟಿ- ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗಡೆಯವರು ಇಂದು ಅಪರಾಹ್ನ 2.30 ಗಂಟೆಗೆ ಮಂಗಳೂರಿನ ಸಕ್ರ್ಯೂಟ್ ಹೌಸ್ ನಲ್ಲಿ ಕರ್ನಾಟಕದ ಸನ್ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚೌಹಾನ್ ರವರನ್ನು ಭೇಟಿಯಾಗಿ ಒಕ್ಕೂಟದ ವತಿಯಿಂದ ಸನ್ಮಾನಿಸಿದರು.

ಕರ್ನಾಟಕ ರಾಜ್ಯ ಸರಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೋ ಸಂರಕ್ಷಣಾ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋ ಕಳ್ಳತನ, ಗೋ ಸಾಗಾಣಿಕೆ ಮತ್ತು ಅಕ್ರಮ ಕಸಾಯಿಖಾನೆಯ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಜ್ಯದ ಹೈನುಗಾರರ ಹಿತರಕ್ಷಣೆಯನ್ನು ಮಾಡಬೇಕೆಂದು ವಿನಂತಿಸಿದರು. ರಾಜ್ಯದ ಎಲ್ಲಾ ಸಹಕಾರಿ ಸಂಸ್ಥೆಗಳ ವಾರ್ಷಿಕ ಲಾಭಾಂಶದಲ್ಲಿ ಕನಿಷ್ಠ 2% ಹಣವನ್ನು ಗೋಶಾಲೆಗಳ ನಿರ್ವಹಣೆ ಮತ್ತು ದೇಶೀಯ ತಳಿಗಳ ಅಭಿವೃದ್ಧಿ, ಗೋ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮೀಸಲಿಡಬೇಕೆಂದು ಸಲಹೆ ನೀಡಿದರು. ಮಾನ್ಯ ಸಚಿವರು ಈ ಬಗ್ಗೆ ಸಕಾರಾತ್ಮಕವಾಗ ಸ್ಪಂದಿಸಿ, ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುರೇಶ್, ನಿರ್ದೇಶಕರುಗಳಾದ ಸಾಣೂರು ನರಸಿಂಹ ಕಾಮತ್, ಶ್ರೀ ಸುಧಾಕರ ರೈ, ವ್ಯವಸ್ಥಾಪಕರಾದ ಡಾ. ನಿತ್ಯಾನಂದ ಭಕ್ತ, ಶ್ರೀ ಸತೀಶ್ ಶೆಟ್ಟಿಯವರು ಉಪಸ್ಥಿತರಿದ್ದರು.

Also Read  ➤ ವಿದ್ಯಾರ್ಥಿನಿಯರಿಗೆ ಅಸಭ್ಯ ಮೆಸೇಜ್​ ಕಳಿಸಿದ ಶಿಕ್ಷಕ ಅಮಾನತು

error: Content is protected !!
Scroll to Top