ಕಡಬ: ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಕ್ರೀಡಾಧಿಕಾರಿಯ ದಿಢೀರ್ ಬದಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಜ. 19. ತಾಲೂಕಿನ ಸಹಾಯಕ ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಹುದ್ದೆಗೆ ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾಮಚಂದ್ರ ಪಿ.ಎನ್ ಅವರನ್ನು ದಿಢೀರ್ ಬದಲಾಯಿಸಿ, ಏನೆಕಲ್ಲು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಣೆಮಜಲು ಅವರನ್ನು ನಿಯೋಜಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಇದರ ಹಿಂದೆ ರಾಜಕೀಯ ಕಸರತ್ತು ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಡಾ ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಈ ದಿಢೀರ್ ಬದಲಾವಣೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ, ಪ್ರಾಮಾಣಿಕವಾಗಿ ದುಡಿಯುವ ಅಧಿಕಾರಿಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Also Read  ಆಕಸ್ಮಿಕ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಮೃತ್ಯು..!

error: Content is protected !!
Scroll to Top