ಸುಬ್ರಹ್ಮಣ್ಯ: ನೂತನ ಸಚಿವ ಎಸ್.ಅಂಗಾರ ಅವರಿಂದ ಧರ್ಮ ಸಮ್ಮೇಳನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 19. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿಯ ಪ್ರಯುಕ್ತ ನಡೆಸಿದ ದೇವಸ್ಥಾನದ ಧರ್ಮಸಮ್ಮೇಳನ ಮಂಟಪವನ್ನು ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಅಂಗಾರ ಅವರು ಇಂದು ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಹಣ ಅಗತ್ಯ ಬಂದಿಲ್ಲ, ಇಲ್ಲಿ ಭಕ್ತರ ಕಾಣಿಕೆಯಿಂದಲೇ ಅಭಿವೃದ್ಧಿ ಕೆಲಸವಾಗುತ್ತದೆ. ನಾನೊಬ್ಬ ಕೂಲಿ ಕಾರ್ಮಿಕನಾಗಿ ಬೆಳೆದು ಬಂದ ದಾರಿಯನ್ನು ಮರೆಯುವುದಿಲ್ಲ. ನೀವುಗಳು ಬಂದ ದಾರಿಯನ್ನು ಮರೆಯಬೇಡಿ. ನನಗೆ ನೀಡಿದ ಅಧಿಕಾರವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಮಾಡಲಿಚ್ಚಿಸಿದ್ದೇನೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಮೋಹನ್ ರಾಮ್ ಸುಳ್ಳಿ, ಪ್ರಸನ್ನ ದರ್ಬೆ, ವನಜಾ ವಿ ಭಟ್, ಗಿರಿಧರ ರೈ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..!

error: Content is protected !!
Scroll to Top