ಮಂಗಳೂರು: ಶ್ರೀನಿವಾಸ್ ಕ್ಯಾಂಪಸ್ ನಲ್ಲಿ “ರೋಬೊಟಿಕ್ಸ್” ತಂತ್ರಜ್ಞಾನದ ಕುರಿತು 2 ದಿನಗಳ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಹೋಲೊ ಸೂಟ್, ಸಿಂಗಾಪುರ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀನಿವಾಸ್ ಮುಕ್ಕ ಕ್ಯಾಂಪಸ್‍ ನಲ್ಲಿ “ರೋಬೊಟಿಕ್ಸ್” ತಂತ್ರಜ್ಞಾನದ ಕುರಿತು 2 ದಿನಗಳ ಕಾರ್ಯಾಗಾರವನ್ನು ಜನವರಿ 22 ಮತ್ತು 23 ರಂದು ಪೂರ್ವಾಹ್ನ 10.00 ರಿಂದ ಅಪರಾಹ್ನ 12.30 ರವರೆಗೆ ಆಯೋಜಿಸಿರುತ್ತದೆ.  ಹೋಲೊ ಸೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹರ್ಷ ಕಿಕ್ಕೇರಿಯವರು ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿರುವರು.

ದಿನಾಂಕ 22 ನೇ ಜನವರಿಯಂದು“À ಕೌಶಲ್ಯ  ಮಾನವರು ಮತ್ತುರೋಬೊಟ್” ಗಳ ಕುರಿತು ವಿಶೇಷ ತಂತ್ರಜ್ಞಾನ ಉಪನ್ಯಾಸ ಹಾಗೂ ಹೋಲೊ ಸೂಟ್‍ ತಂತ್ರಜ್ಞಾನದ ಪ್ರದರ್ಶನ ನಡೆಯಲಿದೆ.  ದಿನಾಂಕ 23ನೇ ಜನವರಿಯಂದು “ರೋಬೊಟಿಕ್ಸ್ ನ ಅನ್ವಯಗಳು ಮತ್ತು ಉಪಯೋಗಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಹೋಲೊ ಸೂಟ್‍ ತಂತ್ರಜ್ಞಾನದ ಪ್ರದರ್ಶನ ಮತ್ತು ರೋಬೊಟಿಕ್ಸ್ ನ ಅನ್ವಯ ಹಾಗೂ ಉಪಯೋಗಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡುವುದು ಈ ಉಪನ್ಯಾಸದ ಮುಖ್ಯ ಉದ್ದೇಶವಾಗಿರುತ್ತದೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರದಲ್ಲಿ ನೃತ್ಯ ಕಾರ್ಯಕ್ರಮ

error: Content is protected !!
Scroll to Top