ವಿಟ್ಲ: ಜಾಗದ ತಕರಾರು ➤ ವ್ಯಕ್ತಿಗೆ ಕತ್ತಿಯಿಂದ ಹಲ್ಲೆ



(ನ್ಯೂಸ್ ಕಡಬ) newskadaba.com ವಿಟ್ಲ, ಜ.19. ಜಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಕಲಹದಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಕರಿಂಕ ಎಂಬಲ್ಲಿ ನಡೆದಿದೆ.





ಕರಿಂಕ ನಿವಾಸಿ ಸಂಜೀವ ಗೌಡ(52) ಅವರು ಗಾಯಗೊಂಡಿದ್ದಾರೆ. ತೋಟಕ್ಕೆ ನೀರು ಬಿಡಲೆಂದು ಹೋದ ಸಂದರ್ಭ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮೋನಮ್ಮ ಎಂಬವರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಸಂಜೀವ ಗೌಡರ ಎಡ ಮತ್ತು ಬಲ ಕೈಗೆ ಕಡಿದು ಗಾಯಗೊಳಿಸಿದ್ದಾರೆ. ಈ ಸಂದರ್ಭ ರಕ್ಷಣೆಗೆಂದು ಬಂದ ಪತ್ನಿ ಹಾಗೂ ಮಕ್ಕಳಿಗೆ ನಿಮ್ಮ ಕುಟುಂಬವನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಈ ಕುರಿತು ಕರಿಂಕ ನಿವಾಸಿಗಳಾದ ಮೋನಮ್ಮ ಹಾಗೂ ತಿಮ್ಮಪ್ಪ ಎಂಬವರ ವಿರುದ್ದ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.






error: Content is protected !!
Scroll to Top