ಕಡಬ: ಎಸ್ಸೆಸ್ಸೆಫ್ ಸೆಕ್ಟರ್ ಗೆ ನೂತನ ಸಾರಥಿಗಳ ಆಯ್ಕೆ ➤ ಅಧ್ಯಕ್ಷರಾಗಿ ಝಿಯಾರ್ ಕೋಡಿಂಬಾಳ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ. 19. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಎಸ್.ಎಸ್.ಎಫ್ ಕಡಬ ಸೆಕ್ಟರ್ ವಾರ್ಷಿಕ ಮಹಾಸಭೆಯು ಜನವರಿ 14ರಂದು ಕೇಂದ್ರ ಜುಮಾ ಮಸ್ಜಿದ್ ಹಾಲ್ ಕಡಬದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಸೆಕ್ಟರ್ ಅಧ್ಯಕ್ಷರಾದ ಝಿಯಾರ್ ಕೋಡಿಂಬಾಳ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿದ್ದೀಖ್ ಅಹ್ಸನಿ ಸ್ವಾಗತಿಸಿದರು. ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಫಾರೂಕ್ ಹಿಮಮಿ ಸಖಾಫಿ ಉದ್ಘಾಟಿಸಿದರು. ಎಸ್ ವೈ ಎಸ್ ಕಡಬ ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಬಶೀರ್ ಮುಸ್ಲಿಯಾರ್ ಹಾಗೂ SMA ಪ್ರಧಾನ ಕಾರ್ಯದರ್ಶಿ ನಾಸಿರ್ ಸಅದಿ ಪನ್ಯಾ & ಎಸ್ ವಯ್ ಎಸ್ ಕಡಬ ಸೆಂಟರ್ ಕೋಶಾಧಿಕಾರಿ ಕಾದರ್ ಮಾಸ್ಟರ್ ಶುಭಹಾರೈಸಿದರು. SSF ಉಪ್ಪಿನಂಗಡಿ ಡಿವಿಷನ್ ಕಾರ್ಯದರ್ಶಿ ಮಹ್ರೂಫ್ ಸುಲ್ತಾನಿ ಆವೇಶಭರಿತ ಸಂಘಟನಾ ತರಗತಿ ನಡೆಸಿದರು. ನಂತರ ಚುನಾವಣಾ ವೀಕ್ಷಕರಾದ SSF ಉಪ್ಪಿನಂಗಡಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ UP ನೇತ್ರತ್ವದಲ್ಲಿ ಒಂದು ವರ್ಷದ ವರದಿಯನ್ನು ಸೆಕ್ಟರ್ ಪ್ರದಾನ ಕಾರ್ಯದರ್ಶಿ ಶರೀಫ್ ಕಲ್ಲಾಜೆ ಮಂಡಿಸಿದರು. ಹಳೆಯ ಸಮೀತಿಯನ್ನು ವಜಾ ಗೊಳಿಸಿ ನೂತನ ಸಮೀತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎರಡನೆ ಬಾರಿಗೆ ಝಿಯಾರ್ ಕೋಡಿಂಬಾಳ ಎಲ್ಲಾ ಕೌನ್ಸಿಲರ್ ಗಳ ಪೂರ್ಣ ಬೆಂಬಲದೊಂದಿಗೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಸಅದಿ ಕಡಬ, ಕೋಶಾಧಿಕಾರಿಯಾಗಿ ಸಿಯಾಬುದ್ದೀನ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಕಮಲ್ ಮಾಸ್ಟರ್ ಕಳಾರ, ಉಪಾಧ್ಯಕ್ಷರಾಗಿ ಸಮೀರ್ ಇಸ್ಮಾಯಿಲ್ ಕಲ್ಲಾಜೆ, ರಾಶಿದ್ ಮದನಿ ಪನ್ಯ, ಕಾರ್ಯದರ್ಶಿಗಳಾಗಿ ಸಿದ್ದೀಕ್ ಅಹ್ಸನಿ, ಕಲಂದರ್ ಕಲ್ಲಾಜೆ ಆಯ್ಕೆಯಾದರು.

Also Read  ಯುವತಿಗೆ ವಂಚನೆ ಪ್ರಕರಣ ➤ ಬೇರೆ ಯುವತಿಯೊಂದಿಗೆ ವಿವಾಹವಾದ ಯುವಕನ ಬಂಧನ

ಸದ್ರಿ ಕಾರ್ಯಕ್ರಮದಲ್ಲಿ ಡಿವಿಷನ್ ಅಧ್ಯಕ್ಷರಾದ FH ಮುಹಮ್ಮದ್ ಮಿಸ್ಬಾಹಿ ದುಅ ನೆರೆವೇರಿಸಿ ಹಿತವಚನ ನೀಡಿದರು. ಸೆಕ್ಟರ್ ಸಮಿತಿಯಲ್ಲಿದ್ದು, ಇದೀಗ ಎಸ್ ವೈ ಎಸ್ ಗೆ ಪಾದಾರ್ಪಣೆ ಮಾಡಿದ ಮುಸ್ತಫಾ ಸ‌ಅದಿ ಪನ್ಯ, ಅಝೀಝ್ ಲತೀಫಿ ಮರ್ದಾಳ ಹಾಗೂ ಹಸನಬ್ಬ ಮರ್ದಾಳರವರನ್ನು ಸನ್ಮಾನಿಸಲಾಯಿತು. ಕಡಬ ಸೆಕ್ಟರ್ ವತಿಯಿಂದ ನಡೆಸಲಾದ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೊ ಇದರ 196ನೇ ರಕ್ತದಾನ ಶಿಬಿರದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ಕೋಡಿಂಬಾಳ ಯುನಿಟಿಗೆ ಕಾರ್ಯಕ್ರಮದಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನೂತನ ಕಾರ್ಯದರ್ಶಿ ವಂದಿಸಿದರು.

Also Read  ಬಿಪಿಎಲ್ ಕಾರ್ಡ್ ರದ್ದತಿ ಆತಂಕದಲ್ಲಿ ಫಲಾನುಭವಿಗಳು

error: Content is protected !!
Scroll to Top