ಕುಟ್ರುಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ವರ್ಗಾವಣೆ ➤ ಪ್ರಭಾರ ಪಿಡಿಒ ಆಗಿ ರಾಮಕುಂಜದ ಜೆರಾಲ್ಡ್ ಮಸ್ಕರೇನಸ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜ.18. ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ರವರನ್ನು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗೆ ವರ್ಗಾಯಿಸಲಾಗಿದ್ದು, ಇವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ರಾಮಕುಂಜ ಪಿಡಿಓ ಅವರನ್ನು ಪ್ರಭಾರವಾಗಿ ನೇಮಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನ ನೂತನ ಪಿಡಿಓ ಆಗಿ ರಾಮಕುಂಜ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ರವರನ್ನು ಪ್ರಭಾರವಾಗಿ ನೇಮಿಸಲಾಗಿದ್ದು, ವಾರದಲ್ಲಿ ಮೂರು ದಿನಗಳ ಕಾಲ ಇವರು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

Also Read  ಕಸ್ತೂರಿ ರಂಗನ್ ಜಾರಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ನಾಳೆ (ನ.15) ಬೃಹತ್ ಪ್ರತಿಭಟನೆ

error: Content is protected !!
Scroll to Top