ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ

(ನ್ಯೂಸ್ ಕಡಬ) newskadaba.com ಆಲಂಕಾರು, ಜ. 18. ಆಟೋ ರಿಕ್ಷಾವೊಂದು ಅಪಘಾತವನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ಚರಂಡಿಗೆ ಬಿದ್ದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ನಡೆದಿದೆ.


ಉಪ್ಪಿನಂಗಡಿಯಿಂದ ಕಡಬಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾವೊಂದು ವಿರುದ್ದ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ವಾಹನದಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

error: Content is protected !!
Scroll to Top