ಅನೈತಿಕ ವಿಚಾರ ಶಂಕಿಸಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಪತಿ…!



(ನ್ಯೂಸ್ ಕಡಬ) newskadaba.com ಮೈಸೂರು, ಜ. 18. ಪತಿಯೋರ್ವ ಪತ್ನಿಯನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಹುಣಸೂರಿನಲ್ಲಿ ನಡೆದಿದೆ.





ಮೃತರನ್ನು ಹುಣಸೂರಿನ ಕಲ್ಕುಣಿಕೆ ಮಾರಿಗುಡಿ ಬೀದಿ ನಿವಾಸಿ ರವಿ ಎಂಬವನ ಪತ್ನಿ ಸೌಮ್ಯ(31) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಾತನೂರು ಗ್ರಾಮದವರಾಗಿದ್ದು, 11 ವರ್ಷಗಳ ಹಿಂದೆ ರವಿಯನ್ನು ವಿವಾಹವಾಗಿದ್ದರು. ಇವರು ಆಶಾ ಕಾರ್ಯಕರ್ತೆ ಆಗಿ ದುಡಿಯುತ್ತಿದ್ದರು ಎಂದು ತಿಲಕಿದು ಬಂದಿದೆ. ಈ ದಂಪತಿಗೆ 9 ಹಾಗೂ 7 ವರ್ಷದ ಎರಡು ಗಂಡು ಮಕ್ಕಳಿದ್ದಾರೆ. ಕಳೆದ 6 ತಿಂಗಳಿನಿಂದ ಪತ್ನಿಯ ಅನೈತಿಕ ಸಂಬಂಧದ ವಿಚಾರವಾಗಿ ರವಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಒಂದು ದಿನ ಪತ್ನಿ ನಿದ್ದೆ ಮಾಡುತ್ತಿದ್ದ ಸಂದರ್ಭ ರವಿ ಕುತ್ತಿಗೆಯ ಮೇಲೆ ಕಾಲು ಅದುಮಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






error: Content is protected !!
Scroll to Top