ಕುಂತೂರು: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಪೆರಾಬೆ, ಜ. 18. ಇಲ್ಲಿನ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಕೊಳೆತ ಮೃತ ದೇಹವೊಂದು ಕುಂತೂರು ಗ್ರಾಮದ ಎರ್ಮಾಳು ಎಂಬಲ್ಲಿ ಪತ್ತೆಯಾಗಿದೆ.


ಮೃತರನ್ನು ಬಾಲು ಕೊರಗ ಎಂದು ಗುರುತಿಸಲಾಗಿದೆ. ಇಲ್ಲಿನ ಮನೆಯೊಂದರಲ್ಲಿ ದುರ್ವಾಸನೆ ಬೀರುತ್ತಿದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಬಾಲು ಕೊರಗ ಎಂಬುವವರು ಮಲಗಿದಲ್ಲಿಯೇ ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಳಿಕ ಪೊಲೀಸರ ನೇತೃತ್ವದಲ್ಲಿ ಮೃತ ಸಂಬಂಧಿಕರ ಉಪಸ್ಥಿತಿಯಲ್ಲಿ ಸ್ಥಳೀಯರು ಸೇರಿ ಜೆಸಿಬಿ ಮೂಲಕ ಗುಂಡಿ ತೋಡಿ ದಫನ ಕ್ರಿಯೆ ನಡೆಸಿದರು. ಕಡಬ ಠಾಣಾ ಎ.ಎಸ್.ಐ ಸುರೇಶ್, ಪೊಲೀಸ್ ಕಾನ್ಸ್‌ಟೇಬಲ್ ರಮೇಶ್, ಭವಿತ್ ರೈ ಸಹಕರಿಸಿದರು.

Also Read  ಜಮ್ಮು-ಕಾಶ್ಮೀರ: ರಾಷ್ಟ್ರಪತಿ ಆಳ್ವಿಕೆ ರದ್ದುಗೊಳಿಸಿದ ಕೇಂದ್ರಾಡಳಿತ ಪ್ರದೇಶ

error: Content is protected !!
Scroll to Top