(ನ್ಯೂಸ್ ಕಡಬ) newskadaba.com ಸುಬ್ರಮಣ್ಯ, ಜ. 18. ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಮರೆತು ಹೋಗಿದ್ದ ಬ್ಯಾಗನ್ನು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಕೆಎಸ್.ಆರ್.ಟಿಸಿ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಜನವರಿ 16 ರಂದು ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಧರ್ಮಸ್ಥಳಕ್ಕೆತೆರಳುತ್ತಿದ್ದ ಪ್ರಯಾಣಿಕರೋರ್ವರು ಬೆಲೆಬಾಳುವ ಲ್ಯಾಪ್-ಟಾಪ್ ಇದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಈಸುಬ್ ಅಲಿ ಮತ್ತು ನಿರ್ವಾಹಕ ಮಂಜು ತಕ್ಷಣವೇ ಪ್ರಯಾಣಿಕನನ್ನು ಹುಡುಕಲು ಆರಂಭಿಸಿದ್ದಾರೆ. ಇವರಿಬ್ಬರ ಪ್ರಯತ್ನದ ಫಲವಾಗಿ ಕೊನೆಗೂ ಬ್ಯಾಗ್ ಬಿಟ್ಟು ಹೋಗಿದ್ದ ಪ್ರಯಾಣಿಕ ಪತ್ತೆ ಹಚ್ಚಿ, ಬ್ಯಾಗ್ ನ್ನಿ ಹಿಂದಿರುಗಿಸಲಾಯಿತು. ಇವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.