ಉಗ್ರರನ್ನು ಸದೆಬಡಿದ ವೀರ ಯೋಧ ಝುಬೇರ್ ಹಳೆನೇರಂಕಿ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಉಗ್ರಗಾಮಿಗಳು ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧ ಆತೂರು ಸಮೀಪದ ಹಳೆನೇರಂಕಿಯ ಝುಬೇರ್ ನೇರಂಕಿ ಅವರನ್ನು ಟೀಮ್ ಬಿ ಹ್ಯೂಮನ್ ಹಾಗೂ ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ನಿಂದ ಕಂಕನಾಡಿಯ ವಿಶ್ವಾಸ್ ಕ್ರೌನ್ ನ ಟ್ಯಾಲೆಂಟ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 2018 ಫೆಬ್ರವರಿಯ ಘಟನೆ ಬಹಳ ಮಹತ್ವದ್ದು, ಒಂದೂವರೆ ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ವೈರಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾದವು ಎಂದರು. ಯುವಕರು ಪಬ್-ಜಿ ಆಡುವುದು, ಗಾಂಜಾ ಡ್ರಗ್ಸ್ ನ್ನು ಹಿಂಬಾಲಿಸುವ ಬದಲು ಮಹಾತ್ಮರನ್ನು, ಸಾಧಕರ ತತ್ವಗಳನ್ನು ಅನುಸರಿಸಿದರೆ ದೇಶಕ್ಕೆ ಕೊಡುಗೆ ನೀಡಬಹುದಾಗಿದೆ. ಆಯಾ ಪ್ರದೇಶದಲ್ಲಿ ದೇಶಭಕ್ತಿ ಹೆಚ್ಚಿಸುವ ಕಾರ್ಯಕ್ರಮ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಕ್ಸ್ ಪರ್ಟ್ರೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇಕ್ ಕರ್ನಿರೆ, ವೈಟ್ ಸ್ಟೋನ್ ಕೆ.ಎಸ್.ಎ ವ್ಯವಸ್ಥಾಪಕ ನಿರ್ದೇಶಕ ಕೆ. ಅಹ್ಮದ್ ಬಾವ ಮೊದಲಾದವರು ಉಪಸ್ಥಿತರಿದ್ದರು.

Also Read  ಕ್ರೀಡಾ ತರಬೇತಿ ಕೇಂದ್ರ – ಅರ್ಜಿ ಆಹ್ವಾನ

error: Content is protected !!
Scroll to Top