ಎಟಿಎಂ ನಿಂದ ನಗದು ದೋಚಿದ ಖತರ್ನಾಕ್ ಕಳ್ಳರು

(ನ್ಯೂಸ್ ಕಡಬ) newskadaba.com ತುಮಕೂರು, ಜ. 18. ಎಟಿಎಂ ಬಾಗಿಲು ಹೊಡೆದು ನಗದು ದೋಚಿದ ಘಟನೆ ಹೊರವಲಯದ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿಯಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಸೇರಿದ ಎಟಿಎಂ ನಿಂದ ನಗದು ಕಳ್ಳತನಗೈಯ್ಯಲಾಗಿದೆ. ಈ ಕಟ್ಟಡದ ಮೇಲ್ಬಾಗದಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ ಗೆ ಮುಂಜಾನೆ ಯುವಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದು, ತುಮಕೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಕೊರೋನಾ ಎರಡನೇ ಅಲೆಗೆ ಬೆಚ್ಚಿಬಿದ್ದ ದಕ್ಷಿಣ ಕನ್ನಡ ➤ ಒಂದೇ ದಿನ 105 ಮಂದಿಗೆ ಕೊರೋನಾ ಪಾಸಿಟಿವ್..‼️

error: Content is protected !!
Scroll to Top