(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ 18. ದೊಡ್ಡ ಮೊತ್ತದ ಲೋನ್ ಕೊಡಿಸುವುದಾಗಿ ನಂಬಿಸಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ವಂಚಿಸಿ 34 ಲಕ್ಷ ರೂ ದೋಚಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಅಗಿದ್ದ ಆರೋಗ್ಯಪ್ಪ(43) ಎಂಬವರು ಮೋಸ ಹೋದವರು. ಇವರಿಗೆ ಸಂಜಯ್ ಶರ್ಮಾ ಎಂಬಾತ ರಾಜಸ್ಥಾನ ಕಂಪನಿಯಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆಮಾಡಿ ನಿಮಗೆ ಐವತ್ತು ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು ಮಾತ್ರ ಎಂದು ಹೇಳಿದ್ದು, ನಿಜವೆಂದು ನಂಬಿದ ಆರೋಗ್ಯಪ್ಪರು ತಮ್ಮ ಅಮೂಲ್ಯ ದಾಖಲೆಗಳನ್ನು ವಾಟ್ಸಪ್ ಮೂಲಕ ಎಲ್ಲ ಪ್ರತಿಗಳನ್ನು ಕಳಿಸಿದ್ದಾರೆ. ನಿಮಗೆ 50 ಲಕ್ಷ ಲೋನ್ ಮಂಜೂರಾಗಿದೆ, ಅದಕ್ಕಾಗಿ 93 ಸಾವಿರ ರೂ. ಅಡ್ವಕೇಟ್, 2ಲಕ್ಷ 50 ಸಾವಿರ ಶೂರಿಟಿ ಶುಲ್ಕ ಹಾಗೂ ಜಿಎಸ್.ಟಿ 3 ಲಕ್ಷ 98 ಸಾವಿರದ ಜೊತೆಗೆ ಇನ್ನಿತರ ಶುಲ್ಕ ಒಟ್ಟು 22 ಲಕ್ಷ ರೂ.ಗಳನ್ನು ಹಂತಹಂತವಾಗಿ ಆರ್.ಟಿ.ಜಿ.ಎಸ್ ಮತ್ತು ನೆಫ್ಟ್ ಮೂಲಕ ಪಾವತಿಸಬೇಕೆಂದು ತಿಳಿಸಿದ್ದಾರೆ. ಇದರಂತೆ ಇವರು ಹಣ ಪಾವತಿ ಮಾಡಿದ್ದು, ತದನಂತರ ಕರೆ ಮಾಡಿದ ನಂಬರ್ ಸ್ವಿಚ್ ಆಫ್ ಆಗಿದೆ. ಆರೋಗ್ಯಪ್ಪರವರು 34 ಲಕ್ಷ ರೂ.ಗಳನ್ನು ಕಳೆದುಕೊಂಡು ಮೋಸ ಹೋಗಿದ್ದು, ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.