ಮಂಗಳೂರು: ಮತ್ತೆ ಸದ್ದುಮಾಡಿದ ಹನಿಟ್ರ್ಯಾಪ್..! ➤ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೋರ್ವನಿಗೆ ಮಹಿಳೆಯರಿಬ್ಬರು ಹನಿ ಟ್ರ್ಯಾಪ್ ಮಾಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂಬಳೆಯ ಯುವಕನೋರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ ಕೃಷ್ಣಾಪುರ ಮೂಲದ ಇಬ್ಬರು ಮಹಿಳೆಯರ ಪರಿಚಯವಾಗಿದ್ದು, ಬಳಿಕ ಯುವಕನೊಂದಿಗೆ ಸಲುಗೆಯಿಂದ ವರ್ತಿಸಿ ಭೇಟಿಯಾಗಲೆಂದು ಕೃಪ್ಣಾಪುರಕ್ಕೆ ಬರುವಂತೆ ಹೇಳಿದ್ದರು. ಇಬ್ಬರು ಮಹಿಳೆಯರ ಜೊತೆ ಮತ್ತಿಬ್ಬರು ಯುವಕರಿದ್ದು, ಈತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ, ಆತನ ಫೋಟೋ ಕ್ಲಿಕ್ಕಿಸಿ ಐದು ಲಕ್ಷ ರೂ. ಬೇಡಿಕೆಯಿಟ್ಟು, ಯುವಕನ ಕಾರನ್ನು ಒತ್ತೆಯಿಟ್ಟು ಕಳುಹಿಸಿದ್ದರು. ಆರೋಪಿಗಳ ಕಿರುಕುಳ ಹೆಚ್ಚಾದಂತೆ ಯುವಕನು ಸಿಸಿಬಿ ಪೊಲೀಸರಿಗೆ ದೂರು ನೀಡಿ ಹಣಕ್ಕಾಗಿ ಪಂಪ್ ವೆಲ್ ಬರುವಂತೆ ಮಹಿಳೆಯರಿಗೆ ಹೇಳಿದ್ದು, ಹಣ ಪಡೆಯಲು ಬಂದ ಸಂದರ್ಭ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Also Read  ವಿಧಾನಸಭಾ ಚುನಾವಣಾ ಕಣಕ್ಕಿಳಿದ ರಾಜಕೀಯ ಪಕ್ಷಗಳ ‘ಸೈಬರ್‌ ಸೈನ್ಯಗಳು'

error: Content is protected !!
Scroll to Top