ಸುಬ್ರಹ್ಮಣ್ಯ: ಫೇಸ್ ಬುಕ್ ಪ್ರೇಮ ಪ್ರಕರಣ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 18. ಫೇಸ್ ಬುಕ್ ಜಾಲತಾಣದ ಮೂಲಕ ಹುಟ್ಟಿಕೊಂಡ ಪರಿಚಯವು ಪ್ರೇಮಕ್ಕೆ ತಿರುಗಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ದೈಹಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ತುಮಕೂರಿನ ಕುಣಿಗಲ್ ಯುವತಿಯೋರ್ವಳು ಇದೀಗ ಠಾಣೆಯ ಮೆಟ್ಟಿಲೇರಿದ್ದಾಳೆ.


ತಾನು ಒಂದು ತಿಂಗಳ ಗರ್ಭವತಿಯಾಗಿದ್ದು, ಬೆಂಗಳೂರಿನ ಕ್ಲಿನಿಕ್ ವೊಂದರಲ್ಲಿ ಗರ್ಭಪಾತ ಮಾಡಿಸಿರುವುದಾಗಿ ಸುಬ್ರಹ್ಮಣ್ಯದ ಕಲ್ಲಪಣೆ ಎಂಬಲ್ಲಿನ ರಕ್ಷಿತ್ ಕುಮಾರ್ ಎಂಬ ಯುವಕನ ವಿರುದ್ದ ದೂರು ದಾಖಲಿಸಿದ್ದಾಳೆ. ಯುವಕ ಮತ್ತು ಯುವತಿಗೆ ಪೇಸ್ ಬುಕ್ ನಲ್ಲಿ ಪರಿಚಯವು ಪ್ರೀತಿಗೆ ತಿರುಗಿ ಬಳಿಕ ಯುವತಿಯು ತುಮಕೂರಿನಿಂದ ಬಂದು ಸುಬ್ರಹ್ಮಣ್ಯದ ರಕ್ಷಿತ್ ನೊಂದಿಗೆ ವಾಸಿಸುತ್ತಿದ್ದಳು . ಹೀಗೇ ಒಂದು ತಿಂಗಳ ಕಾಲ ಒಂದೇ ಮನೆಯಲ್ಲಿದ್ದರು ಎನ್ನಲಾಗಿದೆ. ಬಳಿಕ ಈಕೆ ಗಂಡ ಕಾಣೆಯಾಗಿರುವುದಾಗಿ ಠಾಣೆಗೆ ದೂರು ನೀಡಿದ್ದರು. ಇದೀಗ ಮತ್ತೊಂದು ದೂರು ನೀಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ದೈಹಿಕ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ ಎನ್ನಲಾಗಿದೆ.

Also Read  ಬಂಟ್ವಾಳ: KSRTC ಬಸ್ ಮತ್ತು ಬೈಕ್ ಢಿಕ್ಕಿ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top