ಗೃಹರಕ್ಷಕರು ದೇಶದ ಆಸ್ತಿ ➤ ಡಾ|| ಭರತ್ ಶೆಟ್ಟಿ ವೈ

(ನ್ಯೂಸ್ ಕಡಬ) newskadaba.com ಮಂಗಳೂರು, . 18. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರು ಕೋವಿಡ್-19 ಸಂದರ್ಭದಲ್ಲಿ ಬಹಳ ಉತ್ತಮ ಸೇವೆ ಸಲ್ಲಿಸಿದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಅವರ ಸೇವೆ ಶ್ಲಾಘನೀಯ. ಬೇರೆ ಬೇರೆ ವೃತ್ತಿಯಲ್ಲಿ ಇದ್ದರೂ ತಮ್ಮ ವೃತ್ತಿಯ ಜೊತೆಗೆ ಸಮಾಜಕ್ಕಾಗಿ ಏನಾದರೂ ಕಿಂಚಿತ್ತು ಕೊಡುಗೆ ನೀಡಬೇಕೆನ್ನುವ ಅವರ ಸೇವಾ ಮನೋಭಾವ ಇತರರಿಗೆ ಮಾದರಿ ಹಾಗೂ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ದೇಶದ ಆಸ್ತಿ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಡಾ|| ಭರತ್ ಶೆಟ್ಟಿ ವೈ. ನುಡಿದರು.

ಭಾನುವಾರದಂದು ನಗರದ ಮೇರಿಹಿಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾ ಮೈತ್ರಿ ಜಂಟಿ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನ  ಕಾರ್ಯಕ್ರಮ ನಡೆಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಡಾ|| ಭರತ್ ಶೆಟ್ಟಿ ವೈ. ಇವರು ನೇತ್ರದಾನ ಮಾಡಲು ಸಮ್ಮತಿಸುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳ ಇದರ ಸಮಾದೇಷ್ಟರು  ಮತ್ತು ಪೌರರಕ್ಷಣಾ ತಂಡದ ಮುಖ್ಯ ಪಾಲಕರಾದ ಡಾ|| ಮುರಲೀಮೋಹನ್ ಇವರು ಮಾತನಾಡಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ಲಯನ್ಸ್ ಸೇವಾ ಸಂಸ್ಥೆ ಮತ್ತು ಮಾನವ ಹಕ್ಕುಗಳ ಮಹಾ ಮೈತ್ರಿ ಬೆನ್ನೆಲುಬಾಗಿ ನಿಂತಿದೆ. ದಿನದ 24 ಗಂಟೆಗಳ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರ ಆರೋಗ್ಯ ದೃಷ್ಟಿಯಿಂದ ಈ ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ್ ನೇತ್ರಾಲಯದ ಮೂಲಕ ಆಯೋಜಿಸಲಾಗಿದೆ. ಎಲ್ಲಾ ಗೃಹರಕ್ಷಕರು ಇದರ ಸದುಪಯೋಗಪಡಿಸುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ  ಉಮೇಶ್ ಪ್ರಭು, ಕೃಷ್ಣಾನಂದ ಪೈ ಅಧ್ಯಕ್ಷರು ಲಯನ್ಸ್ ಕ್ಲಬ್ ಮಂಗಳೂರು, ಪ್ರಸನ್ನ ಕುಮಾರ್ ಅಧ್ಯಕ್ಷರು, ಮಾನವ ಹಕ್ಕುಗಳ ಮಹಾ ಮೈತ್ರಿ,,  ಬಾಲಕೃಷ್ಣ ರೈ ಅಧ್ಯಕ್ಷರು, ಕೇಂದ್ರೀಯ ಮಾನವ ಹಕ್ಕುಗಳ ಮಹಾ ಮೈತ್ರಿ, ಆರೋನ್ ಹೇರಿ ಅಧ್ಯಕ್ಷರು ಲಿಯೋ ಕ್ಲಬ್, ಅಜಯ್ ಕುಮಾರ್ ಸದಸ್ಯರು, ಮಾನವ ಹಕ್ಕುಗಳ ಮಹಾಮೈತ್ರಿ ಇವರುಗಳು ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಡಾ|| ವಿಶಾಲ್ ಮತ್ತು ತಂಡ ಈ ಕಾರ್ಯಕ್ರಮವನ್ನು  ನೆರವೇರಿಸಿದರು. ಸುಮಾರು 100 ಜನ ಸಾರ್ವಜನಿಕರು ಹಾಗೂ ಗೃಹರಕ್ಷಕರು ಇದರ ಸದುಪಯೋಗ ಪಡೆದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶುಭ ಕುಲಾಲ್ ರವರು ಪ್ರಾರ್ಥನೆಯನ್ನು ಮಾಡಿದರು. ಶ್ರೀ ರಮೇಶ್, ಡೆಪ್ಯೂಟಿ ಕಮಾಂಡೆಂಟ್ ಇವರು ಸ್ವಾಗತಿಸಿದರು. ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ತೀರ್ಥೇಶ್ ವಂದಿಸಿದರು. ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್ ಹಾಗೂ ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ರಾಜಶ್ರೀ, ಪುರುಷೋತ್ತಮ್, ಸುನಿಲ್, ದಿವಾಕರ್, ಮಹೇಶ್, ಮುಂತಾದವರು ಉಪಸ್ಥಿತರಿದ್ದರು.

Also Read  ಹೊಸ ಯೋಜನೆಗಳಿಂದ ಹೊಸ ಗುರಿ !     ➤  ಸಿಎಂ ಬೊಮ್ಮಾಯಿ..!

error: Content is protected !!
Scroll to Top