ಬಂಟ್ವಾಳ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ ➤ ನೆಕ್ಕಿಲಾಡಿಯ ಓರ್ವನ ಸಹಿತ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.17. ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ಐವರು ಮಹಿಳೆಯರು ಹಾಗೂ ಮೂವರು ಪುರುಷರನ್ನು ಬಂಧಿಸಿದ್ದಾರೆ.

ಭಾನುವಾರದಂದು ಬಿ.ಸಿ.ರೋಡ್ ನ ಭಾರತ್ ಕಾಂಪ್ಲೆಕ್ಸ್ ನ ತಳ ಭಾಗದಲ್ಲಿರುವ ಕೊಠಡಿಯಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ತಂಡದೊಂದಿಗೆ ದಾಳಿ ನಡೆಸಿದ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ 5 ಜನ ಮಹಿಳೆಯರು ಹಾಗೂ ಪುತ್ತೂರು ನೆಕ್ಕಿಲಾಡಿ ನಿವಾಸಿ ಶರಣ್‌ (28), ಬಂಟ್ವಾಳ ಕರಿಯಂಗಳ ನಿವಾಸಿ ಭರತ್(28), ಪುತ್ತೂರು ಚಿಕ್ಕಮೂಡ್ನೂರು ಗ್ರಾಮ ನಿವಾಸಿ ಕಿರಣ್ ಕೆ. (25)ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಟ್ಟು ರೂ. 4,400/ ನಗದು ಹಾಗೂ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ನ. 07ರಂದು ದ.ಕ ಜಿಲ್ಲೆಗೆ ಕನ್ನಡ ರಥ ಆಗಮನ

error: Content is protected !!
Scroll to Top