(ನ್ಯೂಸ್ ಕಡಬ) newskadaba.com ಕಡಬ, ಜ.16. ಕಡಬ ತಾಲ್ಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರು ಕರ್ತವ್ಯದ ಮೇರೆಗೆ ತೆರಳಿದ್ದ ಸಂದರ್ಭದಲ್ಲಿ ಹೊಸ್ಮಠ ಸಮೀಪದ ದೇರಾಜೆ ಕ್ರಾಸ್ ಬಳಿಯ ನಿವಾಸಿ ಯಾಕೂಬ್ ಸೇರಿದಂತೆ ಐವರು ಕಾರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್ ಫೋನ್ ಕಸಿದು ದಾಖಲೆಗಳನ್ನು ಡಿಲೀಟ್ ಮಾಡಿದ್ದಾರೆಂದು ಪಿಡಿಒ ಅವರು ಕಡಬ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳು ತಲೆಮರೆಸಿಕೊಂಡು ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅದೇಶಿಸಿದೆ. ಆರೋಪಿಗಳ ಪರವಾಗಿ ಕಡಬದ ಯುವ ನ್ಯಾಯವಾದಿ ಮುಸ್ತಫಾ ಎಂ, ಅಶ್ರಫ್ ಕೆ ಅಗ್ನಾಡಿ ಹಾಗೂ ಅಬ್ದುಲ್ ಮಜೀದ್ ಖಾನ್ ವಾದಿಸಿದ್ದರು.