ಮಂಗಳೂರು: ಕರಾವಳಿಯ ವಿವಿಧ ದೇವಾಲಯಗಳಲ್ಲಿ ದರೋಡೆ ಮಾಡುತ್ತಿದ್ದ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 16. ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ನಡೆದ ಹಲವಾರು ಕಳ್ಳತನಕ್ಕೆ ಸಂಬಂಧಿಸಿ ನಾಲ್ಕು ಮಹಿಳೆಯರು ಸೇರಿದಂತೆ ಆರು ಜನರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಯಮುನಪ್ಪ ಮುತ್ತಪ್ಪ ಚಲವಾಡಿ (55), ಪ್ರಕಾಶ್ ಚೆನ್ನಪ್ಪ (26), ಶೋಭಾ ಮುತ್ತಾಗರ್ (40), ಕುಮಾರಮ್ಮ ಮಾರುತಿ ಮುತ್ತಾಗರ್ (45), ಶಾಂತಮ್ಮ ಮುತ್ತಾಗರ್ (55) ಹಾಗೂ ಚಂದ್ರಶೇಖರ್ ಶಿವರೆದಪ್ಪ (49) ಎಂಬವರನ್ನು ಬಂಧಿಸಿದ್ದಾರೆ. ಜೊತೆಗೆ ಇವರಲ್ಲಿದ್ದ ಏಳು ಮೊಬೈಲ್ ಫೋನ್‌, 21,540 ರೂ. ನಗದು, ಮತ್ತು ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಕ್ಕೆ ತೆಗೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳು, ಗೋವಾ, ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಶೃಂಗೇರಿ, ಕಟೀಲು ಮತ್ತು ಇತರ ಪ್ರಮುಖ ದೇವಾಲಯಗಳಲ್ಲಿ ಕಳ್ಳತನ ನಡೆಸುತ್ತಿದ್ದರು ಎಂದು ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

Also Read  ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು ➤ ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್.!!

error: Content is protected !!
Scroll to Top