ವಿಕಲ ಚೇತನ ಕೈದಿಯನ್ನು ಕೊಚ್ಚಿಗೆ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 16. ಕೇರಳ ಕೊಲಮಾಸೆರಿ ಎಂಬಲ್ಲಿ ಕಾಸಿಂ ಮಸೀದಿಯ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಜೂನ್ 25ರಂದು ವಿಕಲಚೇತನ ವ್ಯಕ್ತಿಯೋರ್ವನನ್ನು ಕೇಸ್ ನಂ: 567/2020 ರಂತೆ ಕಕ್ಕನಾಡಿನ ಜಿಲ್ಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ಆರೋಪಿಯೊಂದಿಗೆ ಜೈಲಿನ ಅಧಿಕಾರಿಗಳು ಸಂವಹನ ನಡೆಸುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಜೈಲಿನಲ್ಲಿ ಆರೋಪಿಯು ಸಹ ಕೈದಿಗಳೊಂದಿಗೆ ಬೆರೆಯುತ್ತಿರಲಿಲ್ಲ. 2020ರ ಡಿಸೆಂಬರ್ 16ರಂದು ಆರೋಪಿಯನ್ನು ಖುಲಾಸೆಗೊಳಿಸಿ, ಡಿಸೆಂಬರ್ 17 ರಂದು ಆರೋಪಿಯನ್ನು ಪಲ್ಲುರುತಿ, ವಿಲಿ, ಕೊಚ್ಚಿಗೆ ಪರಿಹಾರ ಇತ್ಯರ್ಥಕ್ಕೆ ಸ್ಥಳಾಂತರಿಸಲಾಯಿತು. ಆರೋಪಿಯ ಕುಟುಂಬ ಸದಸ್ಯರ ಮಾಹಿತಿಗಾಗಿ  ಆರೋಪಿಯ ಭಾವಚಿತ್ರವನ್ನು ಎಲ್ಲಾ ಕಡೆ ಕಳುಹಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು. ದೂ.ಸಂಖ್ಯೆ: 0824-2448111. ಮೊಬೈಲ್ ಸಂ:9480024188 ಗೆ ಸಂಪರ್ಕಿಸುವಂತೆ ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಯೂಟ್ಯೂಬ್ ಸಹಾಯದಿಂದ UPSC ತೇರ್ಗಡೆಯಾದ ಡಾ.ಆಕಾಂಕ್ಷಾ ಆನಂದ್

error: Content is protected !!
Scroll to Top