ಮಲ್ಪೆ: ಮೀನುಗಾರಿಕೆಂದು ತೆರಳಿದ್ದ ಮೀನುಗಾರ ಸಮುದ್ರಪಾಲು

(ನ್ಯೂಸ್ ಕಡಬ) newskadaba.com ಉಡುಪಿ, ಜ. 16. ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಬೋಟಿನಿಂದ ಕಾಲು ಜಾರು ಕೆಳಗೆ ಬಿದ್ದು ಮೀನುಗಾರನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಮಲ್ಪೆ ತೀರದಿಂದ ಸುಮಾರು‌13 ನಾಟಿಕಲ್ ಮೈಲಿ ದೂರದಲ್ಲಿ ನಡೆದಿದೆ.


ಮೃತ ಮೀನುಗಾರನನ್ನು ಸುಧಾಕರ ವೆಂಕಣ್ಣ ಹೊಸಕಟ್ಟೆ(39) ಎಂದು ಗುರುತಿಸಲಾಗಿದೆ. ಜನವರಿ ಹತ್ತರ ಸಂಜೆ ನಾಲ್ಕು ಗಂಟೆಯ ವೇಳೆಗೆ ಆಳ ಸಮುದ್ರ ಮೀನುಗಾರಿಕೆಗೆಂದು ಮಲ್ಪೆ ಬಂದರಿನಿಂದ ತ್ರಿಜಲ್ ಬೋಟಿನ ಮೂಲಕ ತೆರಳಿದ್ದರು. ಜನವರಿ ಹದಿಮೂರರ ಮಧ್ಯರಾತ್ರಿ ಮಲ್ಪೆ ಬಂದರಿನಿಂದ ಸುಮಾರು 13 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದು, ಇವರ ಜೊತೆಗಿದ್ದವರು ರಕ್ಷಣೆಗೆ ಮುಂದಾದಾಗ ಇವರು ನಾಪತ್ತೆಯಾಗಿದ್ದರು. ಒಂದೂವರೆ ದಿನದ ಹುಡುಕಾಟದ ಬಳಿಕ ಜ.15ರಂದು ಮಧ್ಯಾಹ್ನ ವೇಳೆಗೆ ಹತ್ತು ನಾಟಿಕಲ್ ಮೈಲಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ಅಕ್ರಮವಾಗಿ ಹಣ ಪಡೆಯುತ್ತಿದ್ದ 3 ಸೈಬರ್ ಕೇಂದ್ರಗಳು - FIR ದಾಖಲು

error: Content is protected !!
Scroll to Top