ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ ➤ ಡಾ. ಮನ್ಪಾಲ್ ದೇಸಾಯಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 16. ಭಾರತೀಯರು ವಿಶ್ವದೆಲ್ಲೆಡೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ  ಮೂಲಕ ಅಸ್ಥಿತ್ವ ಸ್ಥಾಪಿಸಿದ್ದಾರೆ. ಹೀಗಾಗಿ ಹಿಂದಿಯೂ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ, ಎಂದು ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಿಕೆ ಡಾ. ಡಾ. ಮನ್ಪಾಲ್ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.


ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ  ಸಂಘ ಮತ್ತು ಸ್ನಾತಕೋತ್ತರ ವಿಭಾಗಗಳು ಜಂಟಿಯಾಗಿ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹಿಂದಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆನ್‍-ಲೈನ್ ನಲ್ಲಿ ಭಾಗವಹಿಸಿದ್ದ ಅವರು, 2006 ರಿಂದ ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನಾಚರಣೆ ನಡೆಯುತ್ತಿದೆ. ಪ್ರಸ್ತುತ ಹಿಂದಿಯನ್ನು 20 ಕ್ಕೂ ಹೆಚ್ಚು ದೇಶಗಳಲ್ಲಿ ಮಾತನಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ʼಹಿಂದಿ ಸಪ್ತಾಹʼದ ವೇಳೆ ಕಾಲೇಜಿನ ಪ್ರಾಧ್ಯಾಪಕರಿಗೆ ಹಿಂದಿ ಆಲಂಕಾರಿಕ ಬರವಣಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲ ಸ್ಥಾನ ಪಡೆದ ವಾಣಿಜ್ಯ ವಿಭಾಗದ ವಿದ್ಯಾಕಿಶನ್ ಆಳ್ವಾ, ದ್ವಿತೀಯ ಸ್ಥಾನಿ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಡಾ. ಭಾರತಿ ಪ್ರಕಾಶ್ ಮತ್ತು ತೃತೀಯ ಸ್ಥಾನಿ ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿಯವರಿಗೆ ಬಹುಮಾನ ವಿತರಿಸಲಾಯಿತು.

Also Read  ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ

ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿಂದಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು. ಲಾಕ್ಡೌನ್ ಆನ್ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಪ್ರಥಮ ಬಿ.ಎ.ಯ ಮಹಾಲಕ್ಷ್ಮಿ ಮತ್ತು ಯಶಸ್ವಿನಿಯವರನ್ನೂ ಪುರಸ್ಕರಿಸಲಾಯಿತು. ರಸ ಪ್ರಶ್ನೆಯಲ್ಲಿ ಕ್ರಮವಾಗಿ ಪ್ರಥಮ ಮೂರು ಸ್ಥಾನ ಪಡೆದ ರೂಪಾ ಪೆರೇರಾ, ಪಲ್ಲವಿ ಮತ್ತು ರೋಮಿತಾ ಅವರಿಗೂ ಬಹುಮಾನ ವಿತರಿಸಲಾಯಿತು. ಹಿಂದಿ ಸಂಘದ ಉಪಾಧ್ಯಕ್ಷೆ ಡಾ. ನಾಗರತ್ನ ರಾವ್ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಚಾಲಕಿ ಡಾ. ಸುಮಾ ಟಿ. ಆರ್, ಹಿಂದಿ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

Also Read  ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಗೌರವದಿಂದ ನಡೆಸಿಕೊಳ್ಳಿ: ಅಧಿಕಾರಿಗಳಿಗೆ ಪಂಚಾಯತ್ ರಾಜ್ ಇಲಾಖೆ ಎಚ್ಚರಿಕೆ

error: Content is protected !!
Scroll to Top