ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 15. ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಸ್ಥಳೀಯರು ಹಿಡಿದು ಧರ್ಮದೇಟು ನೀಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಟ್ಯದಲ್ಲಿ ನಡೆದಿದೆ.


ಆರೋಪಿ ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಪ್ರಾಪ್ತ ಬಾಲಕನಾಗಿದ್ದು, ಈತನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈತ ಬೆಳಗ್ಗಿನ ಹೊತ್ತಲ್ಲಿ ಸ್ಕೂಟರಿನಲ್ಲಿ ಬಂದು ಕಾಲೇಜು ಹಾಗೂ ಹೈಸ್ಕೂಲ್ ಗೆ ತೆರಳುವ ಹುಡುಗಿಯರ ಎದೆ ಹಾಗೂ ಹಿಂಬಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದು, ಇದಕ್ಕೆ ಹೆದರಿದ ಯುವತಿಯರು ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದರೂ, ಈತ ಮಾತ್ರ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಇಂದು ಬೆಳಗ್ಗೆ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸ್ಥಳೀಯರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಅರಂತೋಡು: ಸೆ. 26ರಂದು ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ

error: Content is protected !!
Scroll to Top