ಮಂಗಳೂರು: ಒಳ ಉಡುಪಿನಲ್ಲಿ 2 ಕೆ.ಜಿ ಅಕ್ರಮ ಚಿನ್ನ ಸಾಗಾಟ ➤ ಇಬ್ಬರು ಅರೆಸ್ಟ್



(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ಒಳುಡುಪಿನಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.





ಆರೋಪಿಗಳನ್ನು ಕಾಸರಗೋಡಿನ ಫೈಝಲ್ ತೊಟ್ಟಿ ಮೇಲ್ಪರಂಬ(37) ಹಾಗೂ ಮೊಹಮ್ಮದ್ ಶುಹೈಬ್(31) ಎಂದು ಗುರುತಿಸಲಾಗಿದೆ. ಇವರಿಬ್ಬರು ಶಾರ್ಜಾದಿಂದ ಮಂಗಳೂರಿಗೆ ಬಂದಿಳಿದಿದ್ದು, ಸಂಶಯದ ಮೇರೆಗೆ ಇವರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ 24 ಕ್ಯಾರೆಟ್ ನ 2.154 ಕೆ.ಜಿ ಚಿನ್ನ ಪತ್ತೆಯಾಗಿದೆ. ಇದೀಗ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, 1.09 ಕೋ.ರೂ ಮೌಲ್ಯದ ಚಿನ್ನವನ್ನು ವಶಪಡಿಸಿದ್ದಾರೆ.






error: Content is protected !!
Scroll to Top