ಸುಳ್ಯ: 1490 ಕೋವಿಡ್ ಲಸಿಕೆ ಪೂರೈಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 15. ಕೊರೋನಾ ವಿರೋಧಿ ಲಸಿಕಾ ವಿತರಣೆ ಎಲ್ಲೆಡೆ ಆರಂಭವಾಗಿದ್ದು, ಸುಳ್ಯದ ತಾಲೂಕು ಕೇಂದ್ರಕ್ಕೂ 1490 ಲಸಿಕೆಗಳು ಬಂದು ತಲುಪಿವೆ.

ಈಗಾಗಲೇ ಸುಳ್ಯದಲ್ಲಿ ಲಸಿಕೆ ಪಡೆಯುವವರ ಪಟ್ಟಿ ಸಿದ್ದಪಡಿಸಿದ್ದು, ಸರಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಸಿಬ್ಬಂದಿಗಳಿಗೆ ಸೇರಿ 100 ಮಂದಿಗೆ ವಿತರಣೆಯಾಗಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳು ಸೇರಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ

error: Content is protected !!
Scroll to Top