(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 15. ದೇಶದಾದ್ಯಂತ ನಾಳೆಯಿಂದ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದ್ದು, ಈ ಕುರಿತು ಕೇಂದ್ರ ಸರಕಾರ ಕೊರೋನಾ ಲಸಿಕಾ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಾರ್ಗಸೂಚಿಗಳು ಈ ರೀತಿಯಾಗಿದೆ:-
ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ನೀಡುವಂತಿಲ್ಲ, ಹೈ ಬಿಪಿ, ಉಸಿರಾಟದ ತೊಂದರೆ ಇರುವವರ ಮೇಲೆ ನಿಗಾ ಇಡಲಾಗುತ್ತೆ, ಮೊದಲ ಬಾರಿ ಪಡೆದ ಲಸಿಕೆಯನ್ನೇ ಮತ್ತೊಂದು ಬಾರಿ ತೆಗೆದುಕೊಳ್ಳುವಂತದ್ದು, ಉದಾಹರಣೆಗೆ ಮೊದಲ ಬಾರಿ ಕೋವಾಕ್ಸಿನ್ ಲಸಿಕೆ ಸ್ವೀಕರಿಸಿದ್ದಲ್ಲಿ 2ನೇ ಬಾರಿಯೂ ಅದೇ ಕಂಪನಿಯ ಡೋಸ್ ತೆಗೆದುಕೊಳ್ಳಬೇಕು, ಮಕ್ಕಳಿಗೆ ಕೊರೊನಾ ಲಸಿಕೆ ಕೊಡುವಂತಿಲ್ಲ, ಅಲರ್ಜಿಯಿಂದ ಬಳಲುವವರಿಗೂ ಲಸಿಕೆಯ ಭಾಗ್ಯವಿಲ್ಲ, 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತೆ, ಮೊದಲು ಡೋಸ್ ತೆಗೆದುಕೊಂಡ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ. ಸುಧಾಕರ್, ನಾಳೆ ಪ್ರಧಾನಿಯವರು ದೇಶಾದ್ಯಂತ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿ ಕೊರೊನಾ ಲಸಿಕಾ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನಾನು ಚಾಲನೆ ನೀಡುತ್ತೇವೆ. ನಾಳೆ ರಾಜ್ಯದ 243 ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.