(ನ್ಯೂಸ್ ಕಡಬ) newskadaba.com ಬಿಳಿಯಾರು, ಜ. 15. ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ವಾರದ ಐದು ದಿನವು ಎಸ್.ಎಲ್.ಆರ್.ಎಮ್ ತಂಡವು ಸ್ವಚ್ಛತೆಯನ್ನು ಮಾಡುತ್ತಾ ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ತರಕಾರಿ ಸಾಗಾಟಗಾರರು ಕೋಳಿ ಸಾಗಾಟಗಾರರು ಜನರ ವಾಸವಿಲ್ಲದ ಸ್ಠಳಗಳಲ್ಲಿ ಕೊಳೆತ ವಸ್ತುವನ್ನು ಬಿಸಾಡುವುದು ಅಭ್ಯಾಸವಾಗಿ ಬಿಟ್ಟಿದೆ.
ಅರಂತೋಡು ಕುಲ್ಚಾರ್ ಸೇತುವೆಯ ಬಳಿ ದುರ್ನಾತ ಬೀರುವ ಕಟ್ಟೊಂದು ಪತ್ತೆಯಾಗಿದೆ. ಪಂಚಾಯತ್ ಸದಸ್ಯ ಪುಷ್ಪಾಧರ್ ಎಂಬವರ ಗಮನಕ್ಕೆ ತಂದು ಅವರು ಸ್ಥಳೀಯರೊಂದಿಗೆ ತೆರಳಿ ಗ್ರಾಮ ಪಂಚಾಯತ್ ಪಿಡಿಓ ಮುಖಾಂತರ ಸುಳ್ಯ ಪೋಲಿಸರಿಗೆ ಮಾಹಿತಿ ನೀಡಿದ್ದು, ಇದರ ಕುರಿತು ಪರಿಶೀಲನೆ ನಡೆಸಿದಾಗ ಸತ್ತ ಕುರಿಯನ್ನು ಚೀಲದಲ್ಲಿ ತುಂಬಿಸಿ ಬಿಸಾಡಿದ್ದರು ಎನ್ನಲಾಗಿದೆ. ಈ ಕಟ್ಟಿನಿಂದ ದುರ್ನಾತ ಬೀರುತ್ತಿದ್ದುದರಿಂದ ಇದನ್ನು ಗುಂಡಿ ತೆಗೆದು ಹಾಕಲಾಗಿದೆ. ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ, ಸುಳ್ಯ ತಾಲ್ಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ವಿನೋದ್ ಉಳುವಾರು, ನವೀನ್, ವಾಹನ ಮಾಲಕ ಚಾಲಕ ಸದಸ್ಯರು ಸಹಕರಿಸಿದರು.