(ನ್ಯೂಸ್ ಕಡಬ) newskadaba.com ಪಾಟ್ನಾ, ಜ. 15. ಇಪ್ಪತ್ತು ತಿಂಗಳ ಮಗುವಿನ ಅಂಗಾಗಳನ್ನು ದಾನ ಮಾಡುವ ಮೂಲಕ ದೇಶದ ಅತೀ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ.
ದಿಲ್ಲಿಯ ಒಂದು ದಂಪತಿಯ 20 ತಿಂಗಳ ಧನಿಷ್ಠಾ ಎಂಬ ಮಗುವೊಂದು ಜನವರಿ 8ರ ಸಂಜೆ ಮನೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಆಡುತ್ತಿದ್ದ ಸಂದರ್ಭ ಕೆಳಗೆ ಬಿದ್ದಿತ್ತು. ತಕ್ಷಣವೇ ಮಗುವನ್ನು ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಆದರೆ, ಜನವರಿ 11ರಂದು ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದರು.
ಧನಿಷ್ಟಾಳಿಗೆ ಚಿಕಿತ್ಸೆ ಮುಂದುವರಿದಿದ್ದರೂ ಆಕೆಯ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಗುಣಮುಖವಾಗದು ಎಂದು ವೈದ್ಯರು ನಮಗೆ ತಿಳಿಸಿದ್ದರು. ಈ ಸಂದರ್ಭ ತಮ್ಮ ಮಕ್ಕಳ ಜೀವ ಉಳಿಸಲು ಅಂಗಾಂಗ ದಾನಿಗಳನ್ನು ಎದುರು ನೋಡುತ್ತಿರುವ ಪೋಷಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆವು. ಬಳಿಕ ವೈದ್ಯರ ಬಳಿ ಬಂದು ಇತರ ರೋಗಿಗಳ ಜೀವ ಉಳಿಯುವುದಾದರೆ ನಮ್ಮ ಪುತ್ರಿಯ ಅಂಗಾಂಗ ದಾನ ಮಾಡಲು ಸಿದ್ಧ ಎಂದು ಹೇಳಿದೆವು. ಅದಕ್ಕೆ ವೈದ್ಯರು ಒಪ್ಪಿದ್ದರು ಎಂದು ಧನಿಷ್ಠಾಳ ತಂದೆ ಅನೀಶ್ ಕುಮಾರ್ ಹೇಳಿದ್ದಾರೆ. ಧನಿಷ್ಠಾಳ ಎಲ್ಲ ಅಂಗಾಂಗಳು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಕೆಯ ಹೃದಯ, ಶ್ವಾಸಕೋಶ, ಎರಡು ಮೂತ್ರಪಿಂಡ ಹಾಗೂ ಎರಡ ಕಾರ್ನಿಯಾಗಳನ್ನು ಆಸ್ಪತ್ರೆಯಲ್ಲಿ ಹೊರತೆಗೆಯಲಾಗಿದೆ. ಈ ಅಂಗಾಂಗಳನ್ನು ಐವರು ರೋಗಿಗಳಿಗೆ ಕಸಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.