ಮಂಗಳೂರು: ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ ಬಿಜೆಪಿ ರಾಜ್ಯಾಧ್ಯಕ್ಷರು ➤ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.15. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯೋರ್ವಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗುರುವಾರ ರಾತ್ರಿ ಮಂಗಳೂರು ನಗರದ ಹೊರವಲಯದ ಗುರುಪುರ ಸೇತುವೆಯ ಬಳಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಯುವತಿಯೋರ್ವಳು ಗಾಯಗೊಂಡಿದ್ದಳು. ಇದೇ ಮಾರ್ಗವಾಗಿ ತೆರಳುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅಪಘಾತ ನಡೆದಿರುವುದನ್ನು ಗಮನಿಸಿ ಯುವತಿ ಇರುವಲ್ಲಿಗೆ ಧಾವಿಸಿದ್ದಾರೆ. ಯುವತಿಯ ತಲೆ ಏಟಾಗಿರುವುದನ್ನು ಗಮನಿಸಿದ ಸಂಸದರು ಕೂಡಲೇ ಆಟೋರಿಕ್ಷಾವೊಂದರಲ್ಲಿ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇದೀಗ ಸಂಸದರ ವೀಡಿಯೊ ಪ್ರಶಂಸೆಗೆ ಪಾತ್ರವಾಗಿದೆ.

Also Read  ಮಾಡದ ತಪ್ಪಿಗೆ ದಲಿತ ಯುವ ಹೋರಾಟಗಾರನಿಗೆ ಶಿಕ್ಷೆ ➤ ಮನನೊಂದು ಆತ್ಮಹತ್ಯೆ ಗೆ ಯತ್ನ

error: Content is protected !!
Scroll to Top