ಮುಖ್ಯಮಂತ್ರಿಯವರನ್ನು ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ…! ➤ ರೇಣುಕಾಚಾರ್ಯ ಗಂಭೀರ ಆರೋಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 14. ಸಿಎಂ ಯಡಿಯೂರಪ್ಪರ ನಾಯಕತ್ವವನ್ನು ಬದಲಾಯಿಸಬೇಕು ಎಂದು ಯಾರೆಲ್ಲ ಹೇಳಿದ್ದರೋ ಅವರೇ ಸಚಿವರಾಗಿರುವುದು ವಿಪರ್ಯಾಸ, ಶಾಸನಸಭೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಿದವರು ಇಂದು ಸಚಿವ ಸ್ಥಾನ ಪಡೆದಿರುವುದು ನೋವಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ‌.

ಸಂಪುಟ ವಿಸ್ತರಣೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹತ್ತಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಯತ್ನಿಸಿದವರೇ ಈಗ ಸಚಿವರಾಗಿದ್ದಾರೆ ಎಂದು ಹೇಳಿದ್ದಾರೆ.

Also Read  ಪುತ್ತೂರು: ಭಾರೀ ಗಾಳಿಮಳೆಗೆ ರಸ್ತೆಗೆ ಉರುಳಿಬಿದ್ದ ಬೃಹತ್ ಮರ ಹಾಗೂ ವಿದ್ಯುತ್ ಕಂಬ ➤ ಸಂಚಾರ ಸ್ಥಗಿತ..!!

error: Content is protected !!
Scroll to Top