ಬೆಳ್ತಂಗಡಿ: ಕೊಟ್ಟಿಗೆಗೆ ಬೆಂಕಿ ಹಿಡಿದು ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್ ಭಸ್ಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 14. ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್, ಮನೆಯ ಅಗತ್ಯ ದಾಖಲೆ ಪತ್ರಗಳು ಹಾಗೂ ನಗದು ಬೆಂಕಿಗಾಹುತಿಯಾದ ಘಟನೆ ಕೊಕ್ಕಡದ ಪಿಜಿನಡ್ಕ ಎಂಬಲ್ಲಿ ನಡೆದಿದೆ.

ಪಿಜಿನಡ್ಕದ ಚೀಂಕ್ರ ಎಂಬವರು ಹೊಸಮನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಹೊಸಮನೆಯಲ್ಲಿಯೇ ವಾಸಿಸುತ್ತಿದ್ದ ಇವರು ಹಳೆ ಮನೆಯಲ್ಲಿ ಅಡಿಗೆ ಮಾಡುತ್ತಿದ್ದರು. ಕೊಟ್ಟಿಗೆಯು ಹಳೆ ಮನೆಗೆ ತಾಗಿಕೊಂಡಿದ್ದು, ಮನೆಯ ವಸ್ತುಗಳನ್ನೆಲ್ಲ ಅದರಲ್ಲಿ ಜೋಡಿಸಿಡಲಾಗಿತ್ತು. ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಮೆನೆಯ ಹೆಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್ ಗೆ ಬೆಂಕಿ ತಗುಲಿ, ಮನೆಯನ್ನು ಆವರಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಬೆಂಕಿ ನಂದಿಸಿದರಾದರೂ ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್ ಜೊತೆಗೆ ಅಗತ್ಯ ದಾಖಲೆ ಪತ್ರ ಹಾಗೂ ಬ್ಯಾಗ್ ನಲ್ಲಿದ್ದ ಮೂವತ್ತು ಸಾವಿರ ಹಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸುಮಾರು ಒಂದೂವರೆ ಲಕ್ಷ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

Also Read  ಕೊರೋನಾ ಅತಂಕದ ನಡುವೆ ವಿದ್ಯಾರ್ಥಿಗಳು ➤ ನಾಳೆಯಿಂದ SSLC ಅಗ್ನಿ ಪರೀಕ್ಷೆ

error: Content is protected !!
Scroll to Top