ಮಂಗಳೂರು ಗ್ರಾಮಾಂತರ- ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14.  ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ  ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಐಕಳ ಗ್ರಾಮ ಪಂಚಾಯತ್‍ ನ ಏಳಿಂಜೆ ಅಂಗನವಾಡಿ ಕೇಂದ್ರ, ಪಾವೂರು ಗ್ರಾಮ ಪಂಚಾಯತ್‍ ನ ಪೋಡಾರ್ ಸೈಟ್ ಅಂಗನವಾಡಿ ಕೇಂದ್ರ,  ಉಲ್ಲಾಳ ನಗರಸಭೆ, ವಾರ್ಡ್ ನಂ. 17 ರ ಕಲ್ಲಾಪು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ. ಪಡುಮಾರ್ನಾಡು ಗ್ರಾಮ ಪಂಚಾಯತ್‍ ನ ಮುಗೇರಕಳ ಅಂಗನವಾಡಿ ಕೇಂದ್ರ, ಚೇಳ್ಯಾರು ಗ್ರಾಮ ಪಂಚಾಯತ್‍ ನ ಚೇಳ್ಯಾರುಪದವು ಅಂಗನವಾಡಿ ಕೇಂದ್ರ, ಮೂಡುಶೆಡ್ಡೆ ಎದುರುಪದವು ಅಂಗನವಾಡಿ ಕೇಂದ್ರ, ಮುಲ್ಕಿ ನಗರ ಪಂಚಾಯತ್ ವಾರ್ಡ್ ನಂ.17ರ ಚಿತ್ರಾಪು ಅಂಗನವಾಡಿ ಕೇಂದ್ರ, ಪಾವೂರು ಗ್ರಾಮ ಪಂಚಾಯತ್‍ ನ ಬದ್ರಿಯಾನಗರ ಅಂಗನವಾಡಿ ಕೇಂದ್ರ, ಹರೇಕಳ ಗ್ರಾಮ ಪಂಚಾಯತ್‍ ನ ಖಂಡಿಗೆ ಮೂಲೆ ಅಂಗನವಾಡಿ ಕೇಂದ್ರ, ಕೋಣಾಜೆ ಗ್ರಾಮ ಪಂಚಾಯತ್‍ ನ ಕೋಣಾಜೆ ಅಂಗನವಾಡಿ ಕೇಂದ್ರ, ಕೆಮ್ರಾಲ್ ಗ್ರಾಮ ಪಂಚಾಯತ್‍ನ  ಹೊಸಕಾಡು ಅಂಗನವಾಡಿ ಕೇಂದ್ರ, ಬಜ್ಪೆ ಗ್ರಾಮ ಪಂಚಾಯತ್‍ ನ ಕೊಂಚಾರು ಅಂಗನವಾಡಿ ಕೇಂದ್ರ, ಆಂಬ್ಲಮೊಗರು ಗ್ರಾಮ ಪಂಚಾಯತ್‍ ನ ಗಾಂಧಿನಗರ ಅಂಗನವಾಡಿ ಕೇಂದ್ರ, ತೆಂಕಮಿಜಾರು ಗ್ರಾಮ ಪಂಚಾಯತ್‍ ನ ತೆಂಕಮಿಜಾರು ಅಂಗನವಾಡಿ ಕೇಂದ್ರ, ಜೋಕಟ್ಟೆ ಗ್ರಾಮ ಪಂಚಾಯತ್‍ ನ ಜೋಕಟ್ಟೆ-3 ಅಂಗನವಾಡಿ ಕೇಂದ್ರ, ಮೂಡಬಿದ್ರೆ ಪುರಸಭೆ, ವಾ.ನಂ.6 ರ ಜೈನ್‍ ಪೇಟೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆ ಖಾಲಿ ಇದೆ.

Also Read  ಯುವತಿ ಕಾಣೆಯಾಗಿದ್ದಾರೆ.


ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್‍ www.anganwadirecruit.kar.nic.in ನಲ್ಲಿ ಫೆಬ್ರವರಿ 6  ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರ ಕಟ್ಟಡ, ವಾಮಂಜೂರು- 575028. ದೂ.ಸಂಖ್ಯೆ: 0824-2263199 ಸಂಪರ್ಕಿಸಬಹುದು ಎಂದು  ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ ವರ್ಗಾವಣೆ

error: Content is protected !!
Scroll to Top