ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಕೌಶಲ್ಯ ತರಬೇತಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14. ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯ ವಿಶೇಷ ಕೇಂದ್ರೀಯ ನೆರವಿನಡಿ (SCA to SCSP) ಪರಿಶಿಷ್ಟ  ಜಾತಿಯ ಜನಾಂಗದ ಫಲಾಪೇಕ್ಷಿಗಳಿಗೆ ಕೌಶಲ್ಯ ತರಬೇತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.


ಅರ್ಹ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಟೆಲಿವಿಷನ್ ಜರ್ನಲಿಸಂ, ಕ್ಯಾಮರಾಮ್ಯಾನ್ ತರಬೇತಿ ಹಮ್ಮಿಕೊಂಡಿದ್ದು, ತರಬೇತಿಯನ್ನು ಮೆ:ಅನನ್ಯ ಕ್ರಿಯೇಷನ್ಸ್, ಮಂಡ್ಯ ಜಿಲ್ಲೆ ಇಲ್ಲಿ ನಡೆಸಲಾಗುವುದು. ಪರಿಶಿಷ್ಟ ಜಾತಿಯ ಕನಿಷ್ಠ 18 ರಿಂದ 25 ವಯೋಮಿತಿಯ ಪದವೀದರ ಯುವಕ/ ಯುವತಿಯರಿಗೆ ನಿರೂಪಣೆ, ವರದಿಗಾರಿಕೆ, ಬುಲೆಟಿನ್ ಪ್ರೋಡ್ಯುಜರ್, ಕಾಪಿ ಎಡಿಟರ್ ತರಬೇತಿಗಳು ಹಾಗೂ ಎಸ್.ಎಸ್.ಎಲ್.ಸಿ ಪಾಸಾಗಿರುವ ಯುವಕ/ ಯುವತಿಯರಿಗೆ ವಿಡಿಯೋ, ಕ್ಯಾಮರಾಮ್ಯಾನ್ ಮತ್ತು ಫೋಟೋಗ್ರಾಫಿ ತರಬೇತಿ ನೀಡಲಾಗುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿ.ಹೆಚ್.ಎಸ್. ರಸ್ತೆ, ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಮಂಗಳೂರು ದೂ. ಸಂಖ್ಯೆ 0824-2420114ನ್ನು ಸಂಪರ್ಕಿಸಲು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಶ್ಲೀಲ ವರ್ತನೆ- ಯುವಕ ಅರೆಸ್ಟ್

 

error: Content is protected !!
Scroll to Top